Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯಲ್ಲಿರೋ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಆ್ಯಕ್ಟಿವ್ ಆಗಿದ್ದಾರೆ. ಅವರು ಒಮ್ಮೊಮ್ಮೆ ಆಡುವ ರೀತಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಈಗ ರಕ್ಷಿತಾ ಶೆಟ್ಟಿ ಅವರು ತಮ್ಮ ಮನಸ್ಸಿನ ಭಾವನೆ ಹೇಳಿಕೊಂಡಿದ್ದಾರೆ. ಅವರಿಗೆ ಗಿಲ್ಲಿ ರೀತಿಯ ಹುಡುಗ ಬೇಕೆಂತೆ! ಆದರೆ, ಗಿಲ್ಲಿಯೇ ಆಗಬೇಕು ಎಂದು ಅವರು ಹೇಳಿಲ್ಲ. ಈ ವಿಡಿಯೋ ಸಾಕಷ್ಟು ವೈರಲ್ ಆಗಿ ಗಮನ ಸೆಳೆದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕಳೆದ ವಾರ ಸುದೀಪ್ ಅವರು ಗೈರಾಗಿದ್ದರು. ಹೀಗಾಗಿ, ಅನೇಕ ಅತಿಥಿಗಳು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದರು. ಇದೀಗ ಬಿಗ್‌ಬಾಸ್ ಮನೆಗೆ ‘ಗೌರಿ ಕಲ್ಯಾಣ’ ಧಾರಾವಾಹಿಯ ಕಲಾವಿದರು ಆಗಮಿಸಿದ್ದು, ಈ ಸಂದರ್ಭದಲ್ಲಿ ಮದುವೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದರು. ಮನೆಗೆ ಆಗಮಿಸಿದ್ದ ಅತಿಥಿ ಮೋನಿಕಾ ಜೊತೆ ಗಿಲ್ಲಿ ನಟ ತಮಾಷೆ ಮಾಡುತ್ತಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ಬಾಯ್ತಪ್ಪಿ ಸತ್ಯ ಹೇಳಿ, ನಂತರ ತಮ್ಮ ಮಾತುಗಳಿಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ.
ಗೌರಿ ಕಲ್ಯಾಣ ಸೀರಿಯಲ್ ಕಲಾವಿದರು ತಮ್ಮ ಸಂಗಾತಿ ಹೇಗಿರಬೇಕೆಂದು ಹೇಳುತ್ತಿರುತ್ತಾರೆ. ನಾಯಕ ನಟನನ್ನು ಉದ್ದೇಶಿಸಿ ಮಾತನಾಡಿದ ಅನುಪಮಾ ಗೌಡ, ನಿಮ್ಮೊಂದಿಗೆ ಮೂವರು ನಾಯಕಿಯರು ಮತ್ತು ಇಲ್ಲಿ ರಕ್ಷಿತಾ ಶೆಟ್ಟಿಯನ್ನು ಪರಿಗಣಿಸಿ ನಿಮ್ಮ ಆಯ್ಕೆ ಯಾರು ಎಂದು ತಿಳಿಸುವಂತೆ ಕೇಳುತ್ತಾರೆ.
ರಕ್ಷಿತಾ ಶೆಟ್ಟಿ ಬಳಿ ಅನುಪಮಾ ಗೌಡ, ನೀನು ಮದುವೆ ಹುಡುಗ ಹೇಗಿರಬೇಕು ಎಂದು ಕೇಳುತ್ತಾರೆ. ಇದಕ್ಕೆ ಒಂದು ಕ್ಷಣವೂ ಯೋಚಿಸದೇ ಗಿಲ್ಲಿ ಹಾಗಿರಬೇಕು ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಈ ಮಾತು ಕೇಳುತ್ತಿದ್ದಂತೆ ಮನೆಮಂದಿಯೆಲ್ಲಾ ಓ… ಎಂದು ತಮಾಷೆ ಮಾಡುತ್ತಾರೆ.
ಇದು ಚರ್ಚೆಗೆ ಕಾರಣ ಆಗಿದೆ. ಆ ಬಳಿಕ ‘ಗಿಲ್ಲಿಯನ್ನೇ ಮದುವೆ ಆಗಬಹುದಲ್ಲ’ ಎಂದು ಮನೆಯವರು ಪ್ರಶ್ನೆ ಹೇಳಿದರು. ‘ನನಗೆ ಗಿಲ್ಲಿ ಬೇಡ. ಗಿಲ್ಲಿಯ ರೀತಿಯ ಗುಣ ಇರೋ ಹುಡುಗ ಸಿಕ್ಕರೆ ಸಾಕು. ನಾನು ಅವನು ಬೆಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ಕೊಟ್ಟರು.