Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹುಲಿ ದಾಳಿಗೆ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳ ವ್ಯಾಪ್ತಿಯಲ್ಲಿ ನಡೆದಿದೆ.
ಸಣ್ಣ ಹೈದ(56) ಮೃತ ಅರಣ್ಯ ಸಿಬ್ಬಂದಿ. ಘಟನಾ ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು?
56 ವರ್ಷದ ಸಣ್ಣ ಹೈದ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಮರಳಹಳ್ಳದ ಕಳ್ಳಬೇಟೆ ಶಿಬಿರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ದಿನ ನಿತ್ಯ ಈ ಮರಳಹಳ್ಳ ಕ್ಯಾಂಪ್ ಸುತ್ತಮುತ್ತ ಬೀಟ್ ಹಾಕುವುದು, ಯಾರಾದರೂ ಕಾಡುಗಳ್ಳರು ಸಂಚರಿಸಿದ್ದಾರೆ, ಬೇಟೆ ನಡೆಸಿದ್ದಾರಾ ಎಂದು ಪತ್ತೆ ಹಚ್ಚುವುದರ ಜೊತೆ ಪ್ರಾಣಿಗಳ ಓಡಾಟದ ಮೇಲು ಕಣ್ಣಿಟ್ಟಿರ ಬೇಕು.
ದಿನ ನಿತ್ಯ ಬೀಟ್ಗೆ ಹೋಗುವ ಹಾಗೆ ತನ್ನ ಕ್ಯಾಂಪ್ನ 4 ಮಂದಿ ಜೊತೆ ಇಂದು ಮಧ್ಯಾಹ್ನ ಸಣ್ಣಹೈದ ಬೀಟ್ ಗೆ ಹೋಗಿದ್ದರು. ಹುಲ್ಲು ಬೀಜಗಳನ್ನ ಆಯುವ ಕೆಲಸ ಮಾಡ್ತಾಯಿದ್ರು. ಈ ವೇಳೆ ಹಠಾತ್ತನೆ ಹುಲಿವೊಂದು ಸಣ್ಣ ಹೈದನ ಮೇಲೆ ದಾಳಿ ನಡೆಸಿದೆ ತಕ್ಷಣವೇ ಅಲರ್ಟ್ ಅದ ಜೊತೆಗಿದ್ದ ಸಿಬ್ಬಂದಿ ಕೂಗಿಕೊಂಡು ಪರಿಣಾಮ ಹುಲಿ ಪರಾರಿಯಾಗಿದೆ, ಆದರೆ ಸಣ್ಣ ಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಸ್ಥಳಕ್ಕೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಎಫ್ ಹಾಗೂ ಮುಖ್ಯಸ್ಥ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ.