Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪುಣೆ: ಇಲ್ಲಿನ ಕುಲಕರ್ಣಿ ಕುಟುಂಬ ಭಾರತದ ಅತೀ ಎತ್ತರದ ಕುಟುಂಬ ಎನ್ನುವ ದಾಖಲೆ ಬರೆದಿದೆ. ಈ ಕುಟುಂಬ ಸದಸ್ಯರ ಸರಾಸರಿ ಎತ್ತರ 6 ರಿಂದ 7 ಅಡಿ ಎತ್ತರ.
ಈ ಕುಟುಂಬದಲ್ಲಿ ಹುಟ್ಟುವ ಎಲ್ಲರೂ ಅತಿ ಎತ್ತರದ ವ್ಯಕ್ತಿಗಳಾಗಿದ್ದಾರೆ. ದಶಕಗಳ ಹಿಂದೆ ಈ ಕುಟುಂಬ ಕುಲಕರ್ಣಿ ಕುಟುಂಬ ಲಿಮ್ಕಾ ಬುಕ್ ದಾಖಲೆ ಪುಟ ಸೇರಿತ್ತು. ಇವರ ಕುಟುಂಬದ ಒಟ್ಟು ಎತ್ತರ 26 ಅಡಿ.
ಪುಣೆಯ ಶರದ್ ಕುಲಕರ್ಣಿ ಕುಟುಂಬದ ಎಲ್ಲರೂ ಎತ್ತರದ ವ್ಯಕ್ತಿಗಳು. ಶರದ್ ಕುಲಕರ್ಣಿ ಅತಿ ಎತ್ತರದ ವ್ಯಕ್ತಿಯಾಗಿದ್ದ ಕಾರಣ ಮದುವೆಯಾಗಲು ಎತ್ತರದ ಹುಡುಗಿ ಹುಡುಕಲು ಕಷ್ಟಪಟ್ಟಿದ್ದರು. ಶರದ್ ಕುಲಕರ್ಣಿ ಎತ್ತರ 7 ಅಡಿ 2 ಇಂಚು ಎತ್ತರದ ವ್ಯಕ್ತಿ. ತೀವ್ರ ಹುಡುಕಾಟದ ಬಳಿಕ 6 ಅಡಿ 3 ಇಂಚು ಎತ್ತರದ ಸಂಜೋತ್ ಕುಲಕರ್ಣಿ ಜತೆ ಮದುವೆಯಾಗಿದ್ದರು. ಈ ದಂಪತಿಯ ಇಬ್ಬರು ಹೆಣ್ಣುಮಕ್ಕಳ ಎತ್ತರವೂ 6 ಅಡಿಗಿಂತ ಹೆಚ್ಚು. ಮಗಳು ಸಾನ್ಯ ಕುಲಕರ್ಣಿ 6 ಅಡಿ ನಾಲ್ಕು ಇಂಚು, ಮತ್ತೋರ್ವ ಮಗಳು ಮೃಗ ಕುಲಕರ್ಣಿ 6 ಅಡಿ 2 ಎಂಚು ಎತ್ತರ ಹೊಂದಿದ್ದಾರೆ.
ಲಿಮ್ಕಾ ಬುಕ್ ದಾಖಲೆ
- ಶರದ್ ಕುಲಕರ್ಣಿ: 7.2 ಅಡಿ ಎತ್ತರ
- ಸಂಜೋತ್ ಕುಲಕರ್ಣಿ : 6.3 ಅಡಿ ಎತ್ತರ
- ಸಾನ್ಯ ಕುಲಕರ್ಣಿ: 6.4 ಅಡಿ ಎತ್ತರ
- ಮೃಗ ಕುಲಕರ್ಣಿ: 6.2 ಅಡಿ ಎತ್ತರ.
1989ರಲ್ಲಿ ಶರದ್ ಕುಲಕರ್ಣಿ ಹಾಗೂ ಸಂಜೋತ್ ಕುಲಕರ್ಣಿ ಮದುವೆಯಾಗಿದ್ದು. ಇವರ ಮದುವೆ ಪುಣೆಯಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ವೇಳೆ ಲಿಮ್ಕಾ ಬುಕ್ ದಾಖಲೆ ಪುಟ ಸೇರಿಕೊಂಡಿತ್ತು. ಹಲವು ವರ್ಷಗಳ ಕಾಲ ವಿಶ್ವದ ಅತಿ ಎತ್ತರದ ದಂಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ಕ್ಯಾಲಿಫೋರ್ನಿಯಾದ ವೇಯ್ನ್ ಹಾಗೂ ಲೌರಿ ಹ್ಯಾಲ್ಕಿಸ್ಟ್ ದಂಪತಿ ಈ ದಾಖಲೆ ಮುರಿದಿದ್ದರು.
ಮೆಟ್ರೋ ರೈಲಲ್ಲಿ ಯುವತಿಯ ಮೈ ಮುಟ್ಟಿ ಅಸಭ್ಯ ವರ್ತನೆ: ಪೊಲೀಸರಿಂದ ಎಚ್ಚರಿಕೆ