newsics.com
ಬೆಂಗಳೂರು: ನಟಿ ಚೈತ್ರಾ ಆಚಾರ್ ಇದೀಗ ಸಮುದ್ರ ತೀರದಲ್ಲಿ ಕುಳಿತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೊಸ ಹೊಸ ಫೋಟೋ ಶೂಟ್, ಬೋಲ್ಡ್ ಲುಕ್, ಅದಕ್ಕಿಂತ ಬೋಲ್ಡ್ ಡ್ರೆಸ್ ಮೂಲಕವೇ ಇಂಟರ್ನೆಟ್ ತುಂಬಾ ಸಂಚಲನ ಮೂಡಿಸೋ ನಟಿ ಚೈತ್ರಾ ಈ ಬಾರಿ ಸಮುದ್ರ ತೀರದಲ್ಲಿ ಮೈ ಚೆಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಬಿಳಿ ಬಣ್ಣದ ಸೀರೆ ಮತ್ತು ಅದಕ್ಕೆ ಮ್ಯಾಚ್ ಆಗುವ ಕೆಂಪು ಬಣ್ಣದ ಬ್ಲೌಸ್ ಧರಿಸಿರುವ ಚೈತ್ರಾ ಆಚಾರ್, ಸಮುದ್ರದ ಅಲೆಗಳ ಮಧ್ಯೆ, ಮರಳಿನ ಮೇಲೆ, ದೋಣಿಯ ಅಂಚಿನಲ್ಲಿ ಕುಳಿತು ಸೆರಗು ಜಾರಿಸಿ ಸುಂದರವಾಗಿ ಪೋಸ್ ನೀಡಿದ್ದಾರೆ.