Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿನಲ್ಲಿ ಹುಲಿಯೊಂದು ಸೆರೆಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಬೇಟೆಯಾಡಿದ್ದ ಹುಲಿ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದರು. ಈ ಹಿನ್ನೆಲೆ ಬೋನ್ ಇರಿಸಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿತ್ತು. ತುಮಕೂರು ಮಾದರಿ ಬೋನಿನಲ್ಲಿದ್ದ ಕರುವನ್ನು ಭಕ್ಷಿಸಲು ಹೋದ ಹುಲಿರಾಯ ಬಂಧಿಯಾಗಿದೆ.
ಹುಲಿಯ ಘರ್ಜನೆ ಸದ್ದಿಗೆ ಅನುಮಾನಗೊಂಡ ಸ್ಥಳೀಯರು, ಬೋನಿನ ಸಮೀಪ ಬಂದು ನೋಡಿದ ವೇಳೆ ಹುಲಿ ಸೆರೆಯಾಗಿರುವುದು ಬೆಳಕಿಗೆ ಬಂದಿದೆ. ಮುಗಿಬಿದ್ದ ಜನರನ್ನು ಕಂಡು ಹುಲಿರಾಯ ಘರ್ಜಿಸಿದೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು ಜನರನ್ನು ನಿಯಂತ್ರಿಸಿದ್ದಾರೆ.
ಡಿಸೆಂಬರ್ 13 ರಂದು ದೇಪಾಪುರ ಗ್ರಾಮದ ಗುರುಮಲ್ಲಪ್ಪ ಎಂಬುವರು ಜಮೀನಿನಲ್ಲಿ ಹಸು ಮೇಯಿಸುವಾಗ ಈ ಹುಲಿ ದಾಳಿ ನಡೆಸಿತ್ತು. ಕುತ್ತಿಗೆಗೆ ಬಾಯಿ ಹಾಕಿ, ರಕ್ತ ಹೀರಿದ ಹಿನ್ನೆಲೆ ಹಸು ಸ್ಥಳದಲ್ಲೇ ಹಸು ಅಸುನೀಗಿತ್ತು. ಹೀಗಾಗಿ, ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದರು.
ಮೈಸೂರು ಅರಮನೆ ಬಳಿ ಬಲೂನ್ಗೆ ತುಂಬುವ ಗ್ಯಾಸ್ ಸಿಲಿಂಡರ್ ಸ್ಪೋಟ, ಮೂವರ ಸಾವು, ಐವರು ಗಂಭೀರ