Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಜಾಹ್ನವಿ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜಾಹ್ನವಿಗೆ ಸುದೀಪ್ ಮುಂದೇನು ಎಂಬ ಪ್ರಶ್ನೆ ಕೇಳಿದ್ರು. ಎಲ್ಲ ಸ್ಪರ್ಧಿಗಳಂತೆ ರಿಬ್ಬನ್ ಕಟ್ ಮಾಡುವ ಕೆಲ್ಸ ಅಂತ ಜಾಹ್ನವಿ ಹೇಳಿದ್ರು. ಆದ್ರೀಗ ಜಾಹ್ನವಿ ಅರ್ಧಕ್ಕೆ ನಿಂತಿದ್ದ ತಮ್ಮ ಸಿನಿಮಾ ಕೆಲ್ಸ ಮುಗಿಸ್ತಿದ್ದಾರೆ.
ಜಾಹ್ನವಿ ಯುವನ್ ರಾಬಿನ್ ಹುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲತಃ ತಮಿಳು ಚಿತ್ರ. ಕನ್ನಡದಲ್ಲಿ ಇದಕ್ಕೆ ಯುವನ್ ಸರ್ಕಾರ್ ಅಂತ ಹೆಸರಿಡಲಾಗಿದೆ. ಕನ್ನಡ, ತಮಿಳು ಮತ್ತು ಹಿಂದಿಯಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಕನ್ನಡದ ಯಶಸ್ವಿ ನಿರ್ದೇಶಕ ಸಂತೋಷ್ ಕುಮಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಯುವನ್ ರಾಬಿನ್ ಹುಡ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲ್ಸ ನಡೆಯುತ್ತಿದ್ದು, ಜಾಹ್ನವಿ ಡಬ್ಬಿಂಗ್ ಕೆಲ್ಸ ಮುಗಿಸಿದ್ದಾರೆ. ಕನ್ನಡ, ತಮಿಳು ಹಾಗೂ ಹಿಂದಿಯಲ್ಲಿ ಜಾಹ್ನವಿ ಟೀಸರ್ ಡಬ್ಬ ಮಾಡಿದ್ದಾರೆ
ಏಪ್ರಿಲ್ ಇಲ್ಲ ಮೇ 2026ಕ್ಕೆ ಸಿನಿಮಾ ತೆರೆಗೆ ಬರಲಿದೆ. ನಿನ್ನಿಂದ ನನ್ನ ಜೀವ ಸಾಂಗ್ ಇಷ್ಟಪಟ್ಟಿರುವ ಜಾಹ್ನವಿ, ಸಿನಿಮಾ ಅಧ್ಬುತವಾಗಿ ಮೂಡಿ ಬಂದಿದೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಂಗ್ ಶೂಟಿಂಗ್ ಅನುಭವವನ್ನೂ ಜಾಹ್ನವಿ ಹಂಚಿಕೊಂಡಿದ್ದಾರೆ. ಚಳಿಯಲ್ಲಿ ಶೂಟಿಂಗ್ ಮಾಡೋದು ಕಷ್ಟವಾದ್ರೂ ಔಟ್ಪುಟ್ ನೋಡಿ ಖುಷಿಯಾಯ್ತು ಎಂದಿದ್ದಾರೆ. ಫೆಬ್ರವರಿಯಲ್ಲಿ ಆಡಿಯೋ ಲಾಂಚ್ ಮಾಡಲು ಚಿತ್ರತಂಡ ಮುಂದಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಜಾಹ್ನವಿ
ಬಿಗ್ ಬಾಸ್ ಮನೆಗೆ ಒಂಟಿಯಾಗಿ ಪ್ರಯಾಣ ಬೆಳೆಸಿದ್ದ ಜಾಹ್ನವಿ, ಫೈನಲಿಸ್ಟ್ ಆಗುವ ನಿರೀಕ್ಷೆ ಹೊಂದಿದ್ರು. ಆದ್ರೆ ಅವರ ಪ್ಲಾನ್ ಉಲ್ಟಾಹೊಡೆದಿದೆ. ಬಿಗ್ ಬಾಸ್ ಮನೆಯಲ್ಲಿ ತಮ್ಮಾಟವನ್ನು ಚೆನ್ನಾಗಿಯೇ ಆಡಿದ್ರೂ, ವೀಕ್ಷಕರು ಅವ್ರ ಕೈ ಹಿಡಿಯಲಿಲ್ಲ. ಅಶ್ವಿನಿ ಗೌಡ ಜೊತೆ ಹೆಚ್ಚು ಆಪ್ತವಾಗಿದ್ದ ಜಾಹ್ನವಿ ಇಲ್ಲೇ ಎಡವಿದ್ದಾರೆ ಅನ್ನೋದು ಪ್ರೇಕ್ಷಕರ ಮಾತು.
ಬೆಂಗಳೂರಿಗೆ ಪರ್ಯಾಯವಾಗಿ 3 ಹೊಸ ನಗರಗಳ ಅಭಿವೃದ್ಧಿ: ಡಿ.ಕೆ ಶಿವಕುಮಾರ್