Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗೋಲ್ಗಪ್ಪಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈಗಿನ ಯುವತಿಯರಿಗಂತೂ ಪಾನಿಪುರಿ ಅಂದ್ರೆ ಎಲ್ಲಿಲ್ಲದ ಆನಂದ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಹ ಪಾನಿ ಪುರಿ ರುಚಿ ಸವಿಯದವರೇ ಇಲ್ಲ. ರಸ್ತೆಯ ಅಂಚಿನಲ್ಲಿ ಪಾನಿಪುರಿ ಸವಿಯಲು ಸಾಲು ಸಾಲಲ್ಲಿ ನಿಂತಿರುವುದನ್ನು ನೋಡಿಯೇ ಇರುತ್ತೀರಿ.ಈ ಚಾಟ್ಸ್ ಇದೀಗ ವಿದೇಶಿಗರ ಹೃದಯ ಗೆಲ್ಲಲು ಪ್ರಾರಂಭಿಸಿದೆ. ವಿದೇಶಿ ಮಹಿಳೆಯೂ ಗರಿಗರಿಯಾದ, ಮಸಾಲೆಯುಕ್ತ ಗೋಲ್ಗಪ್ಪಾ ಸವಿದು, ಇದರ ರುಚಿಗೆ ಫಿದಾ ಆಗಿದ್ದಾರೆ.
@vera__india ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಮದುವೆ ಅಥವಾ ಇನ್ಯಾವುದೋ ಸಮಾರಂಭದಲ್ಲಿ ಭಾಗಿಯಾದಂತೆ ಕಾಣುತ್ತಿದೆ. ನೀಲಿ ಬಣ್ಣದ ಸೀರೆ ಉಟ್ಟಿದ್ದು, ಅದಕ್ಕೆ ಸರಿಹೊಂದುವ ಜ್ಯುವೆಲ್ಲರಿ ಧರಿಸಿರುವುದನ್ನು ಕಾಣಬಹುದು. ಕೈಯಲ್ಲಿ ತಟ್ಟೆಯನ್ನು ಹಿಡಿದುಕೊಂಡು ಇದೇನು ಎಂದು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಳಿ ಕೇಳುತ್ತಾನೆ.
ಈ ವ್ಯಕ್ತಿ ಗೋಲ್ಗಪ್ಪಾ ಎಂದು ಹೇಳುವುದನ್ನು ಕಾಣಬಹುದು. ತದನಂತರದಲ್ಲಿ ಈ ವಿದೇಶಿ ಮಹಿಳೆ ಗೋಲ್ಗಪ್ಪಾ ಸವಿದು ನೃತ್ಯ ಮಾಡುವ ಮೂಲಕ ಮುದ್ದಾಗಿ ರಿಯಾಕ್ಷ ನೀಡಿರುವುದನ್ನು ನೋಡಬಹುದು.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.instagram.com/reel/DSAdydAkl_N/?igsh=MTN4angyams4enh0Zw==