Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ಜೊತೆ ಮಹಿಳೆಯೊಬ್ಬರು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೆಚ್ ಎಸ್ ಆರ್ ಪೊಲೀಸ್ ಠಾಣೆಯಲ್ಲಿ ಹೊಯ್ಸಳ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರ ಜೊತೆ ಮೋನಿಕಾ ಎಂಬ ಮಹಿಳೆ ಎಸ್ಕೇಪ್ ಆಗಿದ್ದಾರೆ. ಮೊದಲ ಗಂಡನನ್ನು ಬಿಟ್ಟು ಎರಡನೇ ಮದುವೆಯಾಗಿದ್ದ ಮೋನಿಕಾ, ಈಗ ಎರಡನೇ ಗಂಡನಿಗೂ ಕೈಕೊಟ್ಟು ಪೊಲೀಸ್ ಕಾನ್ಸ್ ಟೆಬಲ್ ಜೊತೆ ಪರಾರಿಯಾಗಿದ್ದಾಳೆ. ಮಹಿಳೆ ಮೋನಿಕಾಗೆ 12 ವರ್ಷದ ಓರ್ವ ಮಗನಿದ್ದಾನೆ. ಕಾನ್ಸ್ ಟೇಬಲ್ ರಾಘವೇಂದ್ರಗೆ ಕೂಡ ಈಗಾಗಲೇ ಮದುವೆಯಾಗಿ ಮಗಳಿದ್ದಾಳೆ. ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಈ ಕೇಸ್ ಗೆ ಸಂಬಂಧಿಸಿದಂತೆ ಮೂವರನ್ನು ಚಂದ್ರಲೇಔಟ್ ಪೊಲೀಸರು ಕರೆಯಿಸಿ ಹೇಳಿಕೆ ಪಡೆದಿದ್ದಾರೆ. ಈ ವೇಳೆ ಇಡೀ ಪ್ರಕರಣಕ್ಕೆ ಮೋನಿಕಾ ಟ್ವಿಸ್ಟ್ ಕೊಟ್ಟಿದ್ದಾಳೆ.
ಮೋನಿಕಾ ಹಾಗೂ ಪ್ರಿಯಕರ ರಾಘವೇಂದ್ರ ಜೊತೆಯಾಗಿ ಆಗಮಿಸಿದರೆ,ಇತ್ತ ಮೋನಿಕಾ ಪತಿ ಮಂಜುನಾಥ್ ಕೂಡ ಠಾಣೆಗೆ ಆಗಮಿಸಿದ್ದಾರೆ. ಪೊಲೀಸ್ ವಿಚಾರಣೆ ಬಳಿಕ ಹೇಳಿಕೆ ನೀಡಿರುವ ಮೋನಿಕಾ ಹೊಸ ಮಾಹಿತಿ ಬಹಿರಂಗಪಡಿಸಿದ್ದಾಳೆ. ಗಂಡ ಮಂಜುನಾಥ್‌ಗೆ ಆನ್‌ಲೈನ್ ಗೇಮಿಂಗ್ ಚಟ ಇದೆ. ಆನತಿಗೆ ನಾನೇ ದುಡ್ಡು ಕೊಡಬೇಕು, ಸಿಗರೇಟು ನಾನೇ ತಂದುಕೊಡಬೇಕು. ಗಂಡ ಮಂಜುನಾಥ್ ಸೈಕೋ. ಮಗನಿಗೆ ಒಂದು ರೂಪಾಯಿ ಖರ್ಚು ಮಾಡಿಲ್ಲ.ಇವತ್ತು ಮಗನ ಹುಟ್ಟು ಹಬ್ಬ ಇದೆ. ಗಂಡ ಏನು ಮಾಡಿದ್ದಾನೆ ಎಂದು ಮೋನಿಕಾ ಪ್ರಶ್ನಿಸಿದ್ದಾಳೆ.
ಮಗನ ಹುಟ್ಟು ಹಬ್ಬಕ್ಕೆ ಇನ್‌ಸ್ಟಾದಲ್ಲಿ ಸ್ಟೋರಿ ಹಾಕುತ್ತೇನೆ ಎಂದು ಈ ರೀತಿ ಮಾಡಿದ್ದಾನೆ. ಗಂಡ ಮಂಜುನಾಥ್‌ನ ಬಿಟ್ಟು ಮೂರು ತಿಂಗಳಾಗಿದೆ. ಗಂಡ ಕೆಲಸಕ್ಕೆ ಹೋಗಲ್ಲ, ನನ್ನ, ಮಗನ ಸಾಕಲು ಆತನಿಗೆ ಆಗುತ್ತಿಲ್ಲ. ನನಗೆ ರಾಘವೇಂದ್ರ ಸಹಾಯ ಮಾಡಿದ್ದಾನೆ. ಗಂಡ ಸರಿಯಾಗಿ ಇದ್ದರೆ ಸಂಸಾರ ನಡೆಯುತ್ತದೆ. ಶೋಕಿ ಗಂಡನಿಗೆ ಸಿಗರೇಟು ನಾನು ಕೊಡಬೇಕು, ಬಟ್ಟೆಗೆ ಐರನ್ ನಾನು ಹಾಕಬೇಕು. ನಾನೇ ಉಡುಗೊರೆಯಾಗಿ ಗಂಡನಿಗೆ ಕಡಗ, ಸೇರಿ ಇತರ ಆಭರಣ ಕೊಡಿಸಿದ್ದೆ. ನನಗೆ ಮೂರು ಸೈಟ್ ಇದೆ. ಆದರೆ ಗಂಡ ನನಗೆ ತಾಳಿ ಕೂಡ ಕೊಡಿಸಿಲ್ಲ.
ಪ್ರಜ್ವಲ್ ಎಂಬಾತನಿಂದ ನನ್ನ ಸಂಸಾರ ಹಾಳಾಯಿತು ಎಂದು ಮೋನಿಕಾ ಹೇಳಿದ್ದಾಳೆ. ಮಗು ಅವನಿಗೆ ಮಾತ್ರ ಮಗು ಅಲ್ಲ, ನನಗು ಕೂಡ ಮಗು ರಾಘವೇಂದ್ರ ಕೆಲಸದಲ್ಲಿ ಇರೋದ್ರಿಂದ ಉದ್ದೇಶ ಪೂರ್ವಕವಾಗಿ ಗಂಡ ಮಂಜುನಾಥ್ ಈ ರೀತಿ ಮಾಡುತ್ತಿದ್ದಾನೆ. ಮುಂದೆ ನನಗೆ ಏನಾದ್ರು ಅದರೆ ಗಂಡ ಮಂಜುನಾಥ್ ಸೇರಿ ಮೂವರು ಕಾರಣ. ನನ್ನ ಮಗುಗೆ ಏನಾದ್ರು ಅದ್ರೆ ಅವನೇ ಕಾರಣ ಎಂದಿದ್ದಾಳೆ. ನನ್ನ ಅಣ್ಣ, ತಾಯಿಗೆ ತೊಂದರೆ ಆದ್ರೆ ಅವನೇ ಕಾರಣ ಎಂದಿದ್ದಾಳೆ.