newsics.com
ಬಿಜೆಡಿ ನಾಯಕಿ ಮಮತಾ ಮೊಹಾಂತ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜ್ಯಸಭಾ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಂದು ಜಗದೀಪ್ ಧಂಖರ್ ಹೇಳಿದ್ದಾರೆ.
ಈ ಕುರಿತು .ಮಾತನಾಡಿರುವ ಅವರು, ಮಮತಾ ಮೊಹಾಂತ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ವೈಯಕ್ತಿಕವಾಗಿ ನನಗೆ ಹಸ್ತಾಂತರಿಸಿದ್ದಾರೆ. ಅದು ಸಾಂವಿಧಾನಿಕವಾಗಿ ಕ್ರಮಬದ್ಧವಾಗಿದೆ. ಒಡಿಶಾ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯೆ ಮಮತಾ ಮೊಹಾಂತ ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದೇನೆ” ಎಂದು ಜಗದೀಪ್ ಧಂಖರ್ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮಮತಾ ಮೊಹಾಂತಾ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.