Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಧರ್ಮದ ಎರಡು ಪ್ರಮುಖ ಅಂಶಗಳು ಸಕಾರಾತ್ಮಕವಾಗಿ ಸುದ್ದಿಯಾಗುತ್ತಿರುವುದು ಅಚ್ಚರಿ ಮೂಡಿಸಿದೆ.
ಅದರಲ್ಲೂ ಪಾಕಿಸ್ತಾನದ ಶೈಕ್ಷಣಿಕ ವಲಯದಿಂದ ಈ ಸುದ್ದಿ ಮತ್ತಷ್ಟು ಅಚ್ಚರಿ ಮೂಡಿಸುತ್ತಿದೆ. ಲಾಹೋರ್ ವಿಶ್ವವಿದ್ಯಾನಿಲಯದ ಮ್ಯಾನೇಜ್ಮೆಂಟ್ ಸೈನ್ಸಸ್ (LUMS) ತರಗತಿಯೊಳಗೆ ಮಹಾಭಾರತ ಮತ್ತು ಭಗವದ್ಗೀತೆಯ ಭಾಗಗಳನ್ನು ಒಳಗೊಂಡಂತೆ ಸಂಸ್ಕೃತ ಶ್ಲೋಕಗಳು ಕೇಳಿಬಂದಿದ್ದು ಸಂಸ್ಥೆಯು ಐತಿಹಾಸಿಕ ಕ್ರಮದಲ್ಲಿ ಸಂಸ್ಕೃತ ಭಾಷೆಯನ್ನು ಔಪಚಾರಿಕವಾಗಿ ಕಲಿಸಲು ಪ್ರಾರಂಭಿಸಿದೆ.
ಮಹಾಭಾರತ ಟಿವಿ ಸರಣಿಯ ಐಕಾನಿಕ್ ಥೀಮ್ ಹಾಡಾದ “ಹೈ ಕಥಾ ಸಂಗ್ರಾಮ್ ಕಿ” ನ ಉರ್ದು ನಿರೂಪಣೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ. ಪಾಕಿಸ್ತಾನದಲ್ಲಿ ಸಂಸ್ಕೃತದ ಪುನರುಜ್ಜೀವನವಾಗುತ್ತಿದ್ದು, ಭಾಷೆಯ ಕುರಿತು ಮೂರು ತಿಂಗಳ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ.
2027 ರ ವೇಳೆಗೆ ಇದನ್ನು ಪೂರ್ಣ ವರ್ಷವಿಡೀ ನೀಡುವ ಯೋಜನೆಗಳೊಂದಿಗೆ ಸಂಸ್ಕೃತ ಭಾಷೆ, ಮಹಾಭಾರತ ಕಲಿಕೆ ಈಗ ಪೂರ್ಣಪ್ರಮಾಣದ ವಿಶ್ವವಿದ್ಯಾಲಯ ಕೋರ್ಸ್ ಆಗಿ ವಿಕಸನಗೊಂಡಿದೆ.