newsics.com
ಭೂಮಿಯಲ್ಲಿ ನಮಗೆ ತಿಳಿದಿರದ ಅನೇಕ ವಿಸ್ಮಯಕಾರಿ ಸಂಗತಿಗಳಿವೆ. ಅದೇ ರೀತಿ ಈ ಜೀವಿ ಮಾತ್ರ ತಲೆ ಇಲ್ಲದಿದ್ರೂ ಒಂದು ವಾರ ಬದುಕಬಲ್ಲದು. ವಿಚಿತ್ರವೆನಿಸಿದರೂ, ಈ ಜೀವಿ ವಾಸ್ತವವಾಗಿ ಒಂದು ವಾರ ತಲೆ ಇಲ್ಲದೆ ಬದುಕಬಲ್ಲದು ಎಂಬುದು ಸಾಬೀತಾಗಿದೆ. ಈ ಜೀವಿ ನಮ್ಮ ಮನೆಗಳಲ್ಲೂ ಹೆಚ್ಚಾಗಿ ಕಾಣಸಿಗುತ್ತದೆ.
ಇನ್ನು ಈ ಜೀವಿ ನಮಗೆಲ್ಲ ತುಂಬಾ ಚಿರಪರಿಚಿತ, ಅದ್ಯಾವುದು ಅಂದ್ರೆ, ಜಿರಳೆ. ಈ ಜಿರಳೆಗಳೇ ತಲೆಯಿಲ್ಲದಿದ್ರೂ ಜೀವಿಸುತ್ತವೆ ಎಂದು ಹೇಳುತ್ತಾರೆ. ಜಿರಳೆಗಳ ಈ ಅಸಾಧಾರಣ ಉಳಿವಿಗೆ ಕಾರಣವೆಂದರೆ ಈ ಜೀವಿಯು ತನ್ನ ಮೂಗಿನ ಮೂಲಕ ಉಸಿರಾಡುವುದಕ್ಕಿಂತ ಹೆಚ್ಚಾಗಿ ತನ್ನ ದೇಹದ ಮೇಲಿರುವ ಅನೇಕ ಸಣ್ಣ ರಂಧ್ರಗಳ ಮೂಲಕ ಉಸಿರಾಡುತ್ತವಂತೆ.ಪರಿಣಾಮವಾಗಿ, ಜಿರಳೆಗಳು ತಮ್ಮ ತಲೆಯನ್ನು ಕತ್ತರಿಸಿದ ನಂತರವೂ ಉಸಿರಾಡುತ್ತಲೇ ಇರುತ್ತವೆ. ಹಾಗಾಗಿ ಜಿರಳೆಗಳು ವಾರಗಳವರೆಗೆ ಬದುಕಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದೇ ಈ ಜಿರಳೆಯ ವಿಶೇಷ.
ಆದರೆ, ಒಂದೇ ವಾರ ಬದುಕಲು ಕಾರಣವಂದ್ರೆ, ತಲೆ ಇಲ್ಲದಿದ್ರೆ ಆಹಾರ, ನೀರು ಯಾವುದನ್ನೂ ತಿನ್ನಲೂ ಸಾಧ್ಯವಾಗುವುದಿಲ್ಲ. ಈ ಪರಿಣಾಮವಾಗಿ ಜಿರಳೆ ಒಂದೇ ವಾರದಲ್ಲಿ ಸಾವನ್ನಪ್ಪುತ್ತದೆ. ಒಂದು ರೀತಿಯಲ್ಲಿ ಈ ಒಂದು ವಾರ ಜಿರಳೆಗಳಿಗೆ ಶಿಕ್ಷೆಯಂತೆ.