Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸರ್ಕಾರ ಕೆಲಸಕ್ಕಾಗಿ ಓಡಾಡಲು ಹೆಲಿಕಾಪ್ಟರ್ ಅಥವಾ ವಿಮಾನ ಬಳಕೆಗೆ ಮುಂದಾಗಿದೆ.
ಈ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ವಿಮಾನ/ ಹೆಲಿಕಾಪ್ಟರ್ ಖರೀದಿ, ಟೆಂಡರ್, ಬಾಡಿಗೆ ಪಡೆಯುವ ವಿಚಾರಗಳ ಕುರಿತು ಚರ್ಚೆಯಾಗಿದೆ.
ಸುವರ್ಣಸೌಧದಲ್ಲಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಸಚಿವರಾದ ಎಂ.ಬಿ ಪಾಟೀಲ್, ಭೈರತಿ ಸುರೇಶ್, ಸತೀಶ್ ಜಾರಕಿಹೊಳಿ, ಜಾರ್ಜ್ ಭಾಗಿಯಾಗಿದ್ದರು.
ಸಭೆ ಬಳಿಕ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಹೆಲಿಕಾಪ್ಟರ್, ವಿಮಾನ ಖರೀದಿ ಸಭೆಯ ಮಾಹಿತಿ ನೀಡಿದ್ದಾರೆ. ಸರ್ಕಾರದ ಕೆಲಸಕ್ಕೆ ಓಡಾಡಲು ನಮಗೆ ವಿಮಾನ, ಹೆಲಿಕಾಪ್ಟರ್ ಬೇಕು. ಖರೀದಿ ಟೆಂಡರ್, ಬಾಡಿಗೆ ಪಡೆಯುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಒಂದು ಕ್ಯಾಬಿನೆಟ್ ಸಬ್ ಕಮಿಡಿ ಮಾಡಿದ್ದರು. ಇದರಂತೆ ನಾವು ಹೆಚ್ಎಎಲ್‌ಗೆ ಒಂದು ಹೆಲಿಕ್ಯಾಪ್ಟರ್ ಕೊಡಿ ಎಂದು ಕೇಳಿದ್ದೆವು. ಆದರೆ ಹೆಚ್‌ಎಲ್‌ನಿಂದ ಪೂರೈಕೆ ವಿಳಂಬವಾಗಲಿದೆ ಎಂದಿದ್ದರು. ಹೀಗಾಗಿ ಪರ್ಯಾ ಮಾರ್ಗ ಹುಡುಕಿದ್ದೆವು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿನಲ್ಲಿ ಆಯೋಜನೆಗೊಂಡ ಏರ್‌ಶೋಗೆ ಬಂದಾಗ ವಿಮಾನ, ಹೆಲಿಕಾಪ್ಟರ್‌ಗೆ ಮನವಿ ಮಾಡಿದ್ದೆವು. ಕೇಂದ್ರ ಸರ್ಕಾರಕ್ಕೆ ರೆಫರ್ ಮಾಡಿದ್ದೆವು. ಟೆಂಡರ್ ಕರೆದಿದ್ದೇವೆ. ನಮಗೆ ವಿಮಾನ, ಹೆಲಿಕಾಪ್ಟರ್ ಮುಖ್ಯವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಮಾನ, ಹೆಲಿಕಾಪ್ಟರ್ ಖರೀದಿ, ಬಾಡಿಗೆ ಮೂಲಕ ಬಳಕೆ ಲೆಕ್ಕಾಚಾರ ಮಾಡಬೇಕಿದೆ. ಅದಕ್ಕೆಲ್ಲ ಟೆಕ್ನಿಕಲ್ ಕ್ವಾಲಿಫಿಕೇಷನ್ ಇರುವ ಜನ ಬೇಕು. ಹೀಗಾಗಿ ಮತ್ತೆ ಸಭೆ ಸೇರುತ್ತೇವೆ. ಸರ್ಕಾರಕ್ಕೆ ಒಳ್ಳೆ ಸರ್ವೀಸ್ ಕೊಟ್ಟಿರಬೇಕು. ಅಂತಹವರನ್ನು ಮಾತ್ರ ತೆಗೆದುಕೊಂಡು ಮಾಡುತ್ತೇವೆ. ನಮಗೆ ಸರ್ಕಾರದ ಹಣ ಮುಖ್ಯ, ಖರೀದಿ ಮಾಡುವ ಪ್ರಶ್ನೆ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಖಾಸಗಿ ಭಾಗಕ್ಕೆ ರಾಡ್ ಸೇರಿಸಿ ವಿಕೃತಿ