Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಇಸ್ಲಾಮಾಬಾದ್: ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ತಮಗೆ ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದು ವಿವಾದ ಸೃಷ್ಟಿಸಿದ್ದಾರೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಗ್ಗೆ ಪತ್ರಕರ್ತೆ ಅಬ್ಸಾ ಕೋಮನ್ ಕೇಳಿದ ಪ್ರಶ್ನೆಗೆ ಲೆ.ಜ.
ಚೌಧರಿ ಉಡಾಫೆಯ ಉತ್ತರ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ರಿಪೋರ್ಟರ್ ಅಬ್ಸಾ ಕೋಮನ್ ಇಮ್ರಾನ್ ಖಾನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಆಗ ಪಾಕಿಸ್ತಾನ ಸೇನೆ ಮಾಜಿ ಪ್ರಧಾನಿ ಮೇಲೆ ಹೊರಿಸಿರುವ ಆರೋಪಗಳನ್ನು ಅವರು ಪಟ್ಟಿ ಮಾಡುತ್ತಿದ್ದರು. ಪಾಕ್ ಸೇನೆ ಇಮ್ರಾನ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ, ರಾಷ್ಟ್ರ ವಿರೋಧಿ ಮತ್ತು ನವದೆಹಲಿಯ ಏಜೆಂಟ್ ಎಂದು ಟೀಕಿಸುತ್ತಿರುವುದು ನಿಜವೇ? ಎಂದು ಅಬ್ಸಾ ಕೋಮನ್ ಪ್ರಶ್ನಿಸಿದರು.
ಇದಕ್ಕೆ ಲಘು ಧಾಟಿಯಲ್ಲಿ ಉತ್ತರಿಸಿದ ಲೆ.ಜ. ಅಹ್ಮದ್ ಷರೀಫ್ ಚೌಧರಿ, ನೀವು ನಾಲ್ಕನೇಯ ಆರೋಪವನ್ನು ಮರೆತಿದ್ದೀರಿ. ಪಾಕಿಸ್ತಾನ ಸೇನೆ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದು ಕೂಡ ಎಂದು ಪರಿಗಣಿಸುತ್ತದೆ ಎಂದು ಹೇಳುತ್ತಾ, ಮಹಿಳಾ ರಿಪೋರ್ಟರ್ ಅಬ್ಸಾ ಕೋಮನ್ ಅವರಿಗೆ ಕಣ್ಣು ಹೊಡೆದರು.
ಪಾಕ್ ಸೇನಾ ವಕ್ತಾರರ ಈ ವರ್ತನೆ ಕಂಡು ಕೆಲ ಕ್ಷಣ ಮಹಿಳಾ ರಿಪೋರ್ಟರ್ ಅಬ್ಸಾ ಕೋಮನ್ ದಂಗಾದರು. ಆದರೆ ಲೆ.ಜ. ಅಹ್ಮದ್ ಚೌಧರಿ ಮಾತ್ರ ಏನೂ ಆಗಿಯೇ ಇಲ್ಲ ಎಂಬಂತೆ ಬೇರೊಬ್ಬರ ಪ್ರಶ್ನೆಗಳಿಗೆ ಉತ್ತರಿಸಲಾರಂಭಿಸಿದರು.
ಲೆ.ಜ. ಅಹ್ಮದ್ ಷರೀಫ್ ಚೌಧರಿ ಅವರು ಮಹಿಳಾ ರಿಪೋರ್ಟರ್ ಜತೆ ನಡೆದುಕೊಂಡ ರೀತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅನೇಕರು ಪಾಕ್ ಸೇನಾ ವಕ್ತಾರನ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಳೆದ ವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು, ಲೆ.ಜ. ಚೌಧರಿ ಅವರು ನಾರ್ಸಿಸಿಸ್ಟ್ ಎಂದು ಕರೆದಿದ್ದರು. ಇಮ್ರಾನ್ ಖಾನ್ ಸೇನೆಯ ಆತ್ಮಸ್ಥೈರ್ಯ ಕುಗ್ಗಿಸುವಂತ ಹೇಳಿಕೆಗಳನ್ನು ನೀಡುತ್ತಿರುವುದಾಗಿ ಪಾಕ್ ಸೇನಾ ವಕ್ತಾರ ಆರೋಪಿಸಿದ್ದರು.
ಆದರೆ ಇದೇ ವಿಷಯದ ಬಗ್ಗೆ ಪತ್ರಕರ್ತೆ ಪ್ರಶ್ನೆ ಕೇಳಿದಾಗ, ಲೆ.ಜ. ಅಹ್ಮದ್ ಷರೀಫ್ ಚೌಧರಿ ಬೀದಿ ಕಾಮಣ್ಣನ ರೀತಿ ವರ್ತನೆ ತೋರಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
https://twitter.com/i/status/1998275710293815752
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಖಾಸಗಿ ಭಾಗಕ್ಕೆ ರಾಡ್ ಸೇರಿಸಿ ವಿಕೃತಿ