Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಈ‌ ಜೋಡಿಯ ವಿಚ್ಛೇದನಕ್ಕೆ ಕಾರಣವಾಯ್ತು ಈರುಳ್ಳಿ- ಬೆಳ್ಳುಳ್ಳಿ, 11 ವರ್ಷದ ಸಂಸಾರಕ್ಕೇನಾಯ್ತು?
ಕರ್ನಾಟಕದೇಶಪ್ರಮುಖ

ಈ‌ ಜೋಡಿಯ ವಿಚ್ಛೇದನಕ್ಕೆ ಕಾರಣವಾಯ್ತು ಈರುಳ್ಳಿ- ಬೆಳ್ಳುಳ್ಳಿ, 11 ವರ್ಷದ ಸಂಸಾರಕ್ಕೇನಾಯ್ತು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇಲ್ಲೊಂದು ಸಂಸಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯಿಂದ ಕೋಲಾಹಲವೇ ನಡೆದುಹೋಗಿದೆ. ಈ ಗಂಡ-ಹೆಂಡತಿಯ ವಿಚ್ಛೇದನಕ್ಕೆ ಈರುಳ್ಳಿ-ಬೆಳ್ಳುಳ್ಳಿ ಕಾರಣವಾಗಿದೆ.

ಹೆಚ್ಚಿನ ಸಮಸ್ಯೆಗಳಿಲ್ಲದ ಸಾಗುತ್ತಿದ್ದ ಸಂಸಾರಕ್ಕೆ ಈರುಳ್ಳಿ ಬೆಳ್ಳುಳ್ಳಿಯೇ ಶಾಪಗಿದೆ. ಬರೋಬ್ಬರಿ 11 ವರ್ಷಗಳ ಸಂಸಾರದ ಒಡೆದು, ಇದೀಗ ಅಧಿಕೃತವಾಗಿ ಡಿವೋರ್ಸ್ ಪಡೆದ ಘಟನೆ ಅಹಮ್ಮದಾಬಾದ್‌ನಲ್ಲಿ ನಡೆದಿದೆ.

ಈರುಳ್ಳಿ ಬೆಳ್ಳುಳ್ಳಿ ಬೆಲೆ ಏರಿಕೆ ಈ ಕುಟುಂಬಕ್ಕೆ ತಟ್ಟಿರಲಿಲ್ಲ. ಆದರೆ ಈರುಳ್ಳಿ ಬೆಳ್ಳುಳ್ಳಿ ಘಾಟು ಈ ಕುಟುಂಬದ ನಿದ್ದೆಗೆಡಿಸಿತು. ಈ ಜೋಡಿ 2002ರಲ್ಲಿ ಮದುವೆಯಾಗಿದೆ. ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆಹಾರ ಪದ್ಧತಿಗಳಲ್ಲೂ ಹೊಂದಾಣಿಕೆ ಇತ್ತು. ಗಂಡ ಎಲ್ಲಾ ಆಹಾರಕ್ಕೂ ಒಕೆ ಇದ್ದ, ಅತ್ತೆ ಕೂಡ ನಿರ್ದಿಷ್ಟ ಆಹಾರ ಬೇಕು ಎಂದು ಬೇಡಿಕೆ ಇಟ್ಟಿರಲಿಲ್ಲ.

ಈಕೆ ಸ್ವಾಮಿ ನಾರಾಯಣನ ಭಕ್ತೆ. ಹೀಗಾಗಿ ತನ್ನ ಧಾರ್ಮಿಕ ಆಚರಣೆಯ ಭಾಗವಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡುತ್ತಿರಲಿಲ್ಲ. ತನ್ನ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾಳೆ. ಆದರೆ ಗಂಡ, ಅತ್ತೆ ಈರುಳ್ಳಿ ಬೆಳ್ಳುಳ್ಳಿ ಆಹಾರ ಸೇವನೆ ಮಾಡುತ್ತಿದ್ದರು.

ಆರಂಭದಲ್ಲೇ ಎಲ್ಲರೂ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ಸೇವನೆ ಮಾಡಲು ಆರಂಭಿಸಿದ್ದರು. ಇದರ ನಡುವೆ ಅತ್ತೆ ಕೆಲವು ಬಾರಿ ಈರುಳ್ಳಿ ಬೆಳ್ಳುಳ್ಳಿ ಆಹಾರ ಖಾದ್ಯಗಳನ್ನು ಮಾಡುತ್ತಿದ್ದರು. ಇಲ್ಲಿಂದ ಸಮಸ್ಯೆಗಳು ಶುರುವಾಗಿವೆ. ಕೊನೆಗೆ ಒಂದೇ ಮನೆಯಲ್ಲಿ ಪ್ರತ್ಯೇಕ ಅಡುಗೆ ಆರಂಭಗೊಂಡಿತು. ಪತಿ ಹಾಗೂ ಅತ್ತೆಗೆ ಬೇರೆ, ತನಗೆ ಬೇರೆ ಎಂಬಂತೆ ಪದ್ಧತಿಗಳು ಶುರುವಾಯಿತು. ಇದರ ಜತೆ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಶುರುವಾಯಿತು. ಜಗಳ ತಾರಕಕ್ಕೇರಲು ಆರಂಭಗೊಂಡಿತು.

ಜಗಳ ಪ್ರಮಾಣ ಹೆಚ್ಚಾಗುತ್ತಿದ್ದಂತೆ 2013ರಲ್ಲಿ ಮಗುವಿನ ಜತೆ ಪತ್ನಿ ತಾಯಿ ಮನೆ ಸೇರಿಕೊಂಡಿದ್ದಾಳೆ. ಪಂಚಾಯಿತಿ, ಮಾತುಕತೆಗಳು ಮುರಿದುಬಿದ್ದಿತ್ತು. ಹೀಗಾಗಿ ಪತಿ ಅಹಮ್ಮದಾಬಾದ್ ಫ್ಯಾಮಿಲಿ ಕೋರ್ಟ್‌ಗೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ಬಳಿಕ 2024ರಲ್ಲಿ ಫ್ಯಾಮಿಲಿ ಕೋರ್ಟ್ ಡಿವೋರ್ಸ್ ನೀಡಿತ್ತು. ಇದೇ ವೇಳೆ ಪತ್ನಿಗೆ ಜೀವನಾಂಶ ನೀಡಲು ಸೂಚಿಸಿತ್ತು.

ಪತ್ನಿಯೇ ಬಿಟ್ಟು ಹೋಗಿದ್ದಾಳೆ, ಆಕೆಯೊಂದಿಗೆ ನಾವು ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ಸೇವಿಸುತ್ತಿದ್ದೆವು. ಆಕೆಯೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಹೈಕೋರ್ಟ್‌ನಲ್ಲಿ ಮತ್ತಷ್ಟು ದಾಖಲೆಯೊಂದಿಗೆ ಗಂಡನ ಪರ ವಕೀಲರು ವಾದ ಮಂಡಿಸಿದ್ದರು.

ಇತ್ತ ಪತ್ನಿ ತಾನು ಡಿವೋರ್ಸ್‌ಗೆ ವಿರುದ್ಧವಾಗಿಲ್ಲ. ತನಗೆ ಜೀವನಾಂಶ ನೀಡಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಳು. ಬಾಕಿ ಇರುವ ಪಾವತಿಯನ್ನು ಹಂತ ಹಂತವಾಗಿ ಮಾಡುವುದಾಗಿ ಪತಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ದಂಪತಿಗೆ ಡಿವೋರ್ಸ್ ನೀಡಿದೆ.

ಮಗಳನ್ನು ಅಸಭ್ಯವಾಗಿ ಮುಟ್ಟಿದ್ದಕ್ಕೆ ಲಿವ್ ಇನ್ ಪಾರ್ಟ್‌ನರ್‌‌ನನ್ನು ಕೊಂದ ಎರಡು ಮಕ್ಕಳ ತಾಯಿ

TAGGED:Onion and garlic were the reason for this couple's divorce
Share This Article
Facebook Twitter Copy Link Print
Previous Article ಮಗಳನ್ನು ಅಸಭ್ಯವಾಗಿ ಮುಟ್ಟಿದ್ದಕ್ಕೆ ಲಿವ್ ಇನ್ ಪಾರ್ಟ್‌ನರ್‌‌ನನ್ನು ಕೊಂದ ಎರಡು ಮಕ್ಕಳ ತಾಯಿ
Next Article ಕೌಟುಂಬಿಕ ಜಗಳಕ್ಕೆ 6 ತಿಂಗಳ ಮಗುವನ್ನೇ ಕಿಡ್ನ್ಯಾಪ್ ಮಾಡಿದ ತಂದೆ.!

Popular Posts

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

You Might Also Like

ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read
ಕರ್ನಾಟಕದೇಶಪ್ರಮುಖ

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read
ಕರ್ನಾಟಕಪ್ರಮುಖ

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?