Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > AIನಿಂದ ಶೇ.80ರಷ್ಟು ಉದ್ಯೋಗ ಕಡಿತ; ಕಳವಳ ವ್ಯಕ್ತಪಡಿಸಿದ AI ಗುರು
ದೇಶಪ್ರಮುಖ

AIನಿಂದ ಶೇ.80ರಷ್ಟು ಉದ್ಯೋಗ ಕಡಿತ; ಕಳವಳ ವ್ಯಕ್ತಪಡಿಸಿದ AI ಗುರು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

AI ನಿಂದ ಶೇ 80ರಷ್ಟು ನಿರುದ್ಯೋಗ ಎದುರಿಸುವ ಸಾಧ್ಯತೆಯಿರುವುದರಿಂದ ಜಾಗತಿಕವಾಗಿ ಪ್ರತಿ ಸರ್ಕಾರವೂ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸಲಿವೆ ಎಂದು ಸ್ಟುವರ್ಟ್ ರಸೆಲ್ ಎಚ್ಚರಿಸಿದ್ದಾರೆ

AI ಗುರು ಎಂದೇ ಹೆಸರಾಗಿರುವ ಸ್ಟುವರ್ಟ್ ರಸೆಲ್ ಉದ್ಯೋಗ ಮಾರುಕಟ್ಟೆಯ ಮೇಲೆ ಕೃತಕ ಬುದ್ಧಿಮತ್ತೆಯ (AI) ಸಂಭಾವ್ಯ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಹುತೇಕ ಟೆಕ್ ಕಂಪೆನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿರುವ ಸಮಯದಲ್ಲಿ AI ಒಂದು ದಿನ CEOಗಳನ್ನೂ ಬದಲಿಸಬಹುದು ಎಂದು ರಸೆಲ್ ಹೇಳಿದ್ದಾರೆ.
►ಸಾವಿರಾರು ಉದ್ಯೋಗ ಕಡಿತ
AI ಅಳವಡಿಸಿಕೊಂಡ ಬಳಿಕ ಅನೇಕ ದೊಡ್ಡ ಟೆಕ್ ಕಂಪೆನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆದರೆ, ಈ ವಜಾಗೆ ಬದಲಾಗಿ AI ನಲ್ಲಿ ಪರಿಣತಿ ಹೊಂದಿರುವ ಹೊಸ ಕಾರ್ಮಿಕರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಕಂಪೆನಿಗಳು ಹೇಳುತ್ತಿವೆ. ಹಾಗಿದ್ದರೂ AI ಗುರು ಸ್ಟುವರ್ಟ್ ರಸೆಲ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. AI ಬಂದ ನಂತರ ಯಾರ ಉದ್ಯೋಗವೂ ಸುರಕ್ಷಿತವಲ್ಲ ಎಂದು ಅವರು ಹೇಳಿದ್ದಾರೆ.
►CEO ಅಥವಾ ಸರ್ಜನ್ ಕೆಲಸಕ್ಕೂ AI ಸೈ
“AI ವ್ಯವಸ್ಥೆಗಳು ಪ್ರಸ್ತುತ ನಾವು ಕೆಲಸ ಎಂದು ಏನನ್ನು ಕರೆಯುತ್ತೇವೆಯೋ, ಅವೆಲ್ಲವನ್ನೂ ಬದಲಿಸುವ ಸಾಮರ್ಥ್ಯ ಹೊಂದಿವೆ. ಅತಿ ನುರಿತ ಉದ್ಯೋಗಿಗಳ ಅಗತ್ಯವಿರುವ ಕ್ಷೇತ್ರದಲ್ಲೂ AI ಬದಲಾವಣೆ ತರಬಲ್ಲದು. AI ಸರ್ಜನ್ ಆಗಬಹುದು. ಸರ್ಜನ್ ಕೆಲಸವನ್ನು ಏಳು ಸೆಕೆಂಡ್ ಗಳಲ್ಲಿ AI ಕಲಿತುಕೊಳ್ಳಬಹುದು ಮತ್ತು ಮಾನವನಿಗಿಂತ ವೇಗವಾಗಿ ಮತ್ತು ಸುರಕ್ಷಿತವಾಗಿ ಕೆಲಸ ಮುಗಿಸಬಲ್ಲದು” ಎಂದು ಅವರು ಹೇಳಿದ್ದಾರೆ.
CEO ಕೆಲಸವನ್ನೂ AI ಚೆನ್ನಾಗಿ ಮಾಡಬಲ್ಲದು. ಪ್ರತಿಸ್ಪರ್ಧಿಗಳೆಲ್ಲರೂ AI ಚಾಲಿತ CEO ಬಳಸಿ ಅತ್ಯುತ್ತಮವಾಗಿ ನಿರ್ಧಾರ ಕೈಗೊಂಡು ಯಶಸ್ವಿ ಕೆಲಸ ಮಾಡುತ್ತಿರಬೇಕಾದರೆ ಮಾನವ CEO ಬಳಕೆ ಮಾಡುತ್ತೇವೆ ಎಂದು ಯಾರೂ ಹೇಳಲಾರರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“AI ಬಳಕೆಯಿಂದ ಶೇ 80ರಷ್ಟು ಉದ್ಯೋಗ ಕಳೆದುಕೊಳ್ಳುವ ಅಥವಾ ನಿರುದ್ಯೋಗವನ್ನು ಎದುರಿಸುವ ಸಾಧ್ಯತೆಯಿರುವುದರಿಂದ ಜಾಗತಿಕವಾಗಿ ಪ್ರತಿ ಸರ್ಕಾರವೂ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸಲಿವೆ” ಎಂದು ಅವರು ಹೇಳಿದ್ದಾರೆ.
►ಉದ್ಯೋಗ ಬದಲಾಗುವ ಸಾಧ್ಯತೆ
ಸ್ಟುವರ್ಟ್ ರಸೆಲ್ ರಂತೆ ಇತರ ಕೆಲವು ಪ್ರಮುಖರೂ AI ಉದ್ಯೋಗ ಕಸಿದುಕೊಳ್ಳುವ ಬಗ್ಗೆ ಮಾತಾಡಿದ್ದಾರೆ. ಅಮೆರಿಕದ ಉದ್ಯಮಿ ಮತ್ತು ವಕೀಲರು ಆಗಿರುವ ಆಂಡ್ರ್ಯೂ ಯಾಂಗ್ ಮತ್ತು ಆಂಥ್ರೋಪಿಕ್ CEO ಆಗಿರುವ ಡ್ಯಾರಿಯಿ ಅಮೊಡೈ ಪ್ರಕಾರ ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳು ಕಳೆದು ಹೋಗಲಿವೆ ಅಥವಾ ಬದಲಾಗಲಿವೆ. ಬಹುತೇಕ ತಜ್ಞರು ಉದ್ಯೋಗಗಳು ಕನಿಷ್ಠವಾಗಲಿವೆ ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.
►ಉದ್ಯೋಗ ಆಯ್ಕೆಯ ವಿಷಯ!
ಆದರೆ ನಿವಿಡಾದ ಜೆನ್ಸನ್ ಹುವಾಂಗ್ ಮತ್ತು ಮೆಟಾದ ಯಾನ್ ಲೆಕ್ಯುನ್ ಅವರು AI ಉದ್ಯೋಗ ಕಸಿದುಕೊಳ್ಳುವ ಬದಲಾಗಿ ಉದ್ಯೋಗದಲ್ಲಿ ಪರಿವರ್ತನೆ ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋಟ್ಯಾಧಿಪತಿ ಎಲಾನ್ ಮಸ್ಕ್ ಹೇಳುವ ಪ್ರಕಾರ AI ಭವಿಷ್ಯದಲ್ಲಿ ಜನರಿಗೆ ಕೆಲಸ ಮಾಡುವುದು ಆಯ್ಕೆಯ ವಿಷಯವಾಗಲಿದೆ.

ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು?

TAGGED:AI guru expresses concern over 80% job loss due to AI
Share This Article
Facebook Twitter Copy Link Print
Previous Article ಗಲ್ಲು ಶಿಕ್ಷೆಗೆ ಒಳಗಾಗಿರುವ ಶೇಖ್ ಹಸೀನಾ ಭಾರತದಲ್ಲಿ ಎಷ್ಟು ದಿನ ಇರಬಹುದು?
Next Article Goa nightclub fire ಗೋವಾ ನೈಟ್ ಕ್ಲಬ್‌ನಲ್ಲಿ ಭೀಕರ ದುರಂತ: 23 ಮಂದಿ ಸಜೀವ ದಹನ

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?