Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ; ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ
ಕರ್ನಾಟಕಪ್ರಮುಖ

ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ; ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ.
ಸಂಧ್ಯಾ (32) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ.
ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ ಅರೇನೂರು ಗ್ರಾಮದಿಂದ 20 ಕಿಮೀ ದೂರದ ಶಿರಗೋಳ ಗ್ರಾಮದ ರವಿ ಅವರೊಂದಿಗೆ ಸಂಧ್ಯಾ ಮದುವೆಯಾಗಿತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಮೂವರು ಮಕ್ಕಳಿದ್ದರು. ಆದರೆ ಇವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಗಂಡನ ಬಿಟ್ಟು ಬಂದಿದ್ದ ಸಂಧ್ಯಾ, ಕಳೆದ 3 ವರ್ಷಗಳಿಂದ ಅರೇನೂರು ಗ್ರಾಮದ ತಾಯಿ ಮನೆ ಸೇರಿದ್ದರು. ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಸಂಧ್ಯಾ ನಾಪತ್ತೆಯಾಗಿದ್ದು, ಮನೆಯವರು ಎಷ್ಟು ಹುಡುಕಿದ್ರೂ ಅವರ ಸುಳಿವಿರಲಿಲ್ಲ. ಆತಂಕಗೊಂಡ ಅವರ ತಂದೆ ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ನೀಡಿದ್ದರು. ಆದರೆ ಸೋಮವಾರ ಸಂಜೆ ಅರೇನೂರು ಗ್ರಾಮದ ತಾಯಿ ಮನೆಗೆ ಸಂಧ್ಯಾ ವಾಪಸ್ ಬಂದಿದ್ದಾರೆ. ತಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಆದ್ರೆ ನಿನ್ನೆ ಬೆಳಗ್ಗೆ ಮನೆಯ ಹಿಂಭಾಗ ಅವರು ಬಟ್ಟೆ ತೊಳೆಯುತ್ತಿದ್ದ ಸಂಧ್ಯಾರ ಕುತ್ತಿಗೆಯನ್ನು ಚಾಕುವಿನಿಂದ ಸೀಳಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ.
ಇನ್ನು ಸಂಧ್ಯಾ ಕೊಲೆಗೆ ಲವ್ ಕಹಾನಿ ಕಾರಣವಾಗಿರಬಹುರು ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ಕುಟುಂಬದ ಹತ್ತಿರದ ಸಂಬಂಧಿಯೊಂದಿಗೆ ಮೂರು ಮಕ್ಕಳ ತಾಯಿ ಸಂಧ್ಯಾಳಿಗೆ ಪ್ರೇಮವಾಗಿತ್ತು. ಗಂಡನಿಂದ ದೂರವಾಗಿದ್ದ ಸಂಧ್ಯಾ ಮತ್ತೊಂದು ಮದುವೆ ಬಗ್ಗೆ ಯೋಚನೆ ಮಾಡಿದ್ದರು. ಆದರೆ ಈ ಪ್ರೇಮಕ್ಕೆ ಕುಟುಂಬದ ವಿರೋಧ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಮಕ್ಕಳನ್ನು ಕರೆದುಕೊಂಡ ಸಂಧ್ಯಾ ಪ್ರೇಮಿ ಜೊತೆ ಹೋಗಿದ್ದರು. ಇತ್ತ ತಂದೆ ಮಗಳ ಮಿಸ್ಸಿಂಗ್ ಬಗ್ಗೆ ದೂರು ನೀಡಿದ್ದರಿಂದ, ಪೊಲೀಸರಿಗೆ ಇವರ ಸುಳಿವು ಸಿಕ್ಕ ಮಾಹಿತಿ ಬೆನ್ನಲ್ಲೇ ತಾಯಿ ಮನೆಗೆ ಸಂಧ್ಯಾ ಹಿಂದಿರುಗಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡ ಪ್ರೇಮಿ, ಸಂಧ್ಯಾ ಹತ್ಯೆಮಾಡಿದ್ನಾ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಹಂತಕನ ಬಂಧನಕ್ಕೆ ಎರಡು ತಂಡ ರಚನೆ ಮಾಡಿ ಪೊಲೀಸರು ಶೊಧ ನಡೆಸುತ್ತಿದ್ದಾರೆ.

ನಟ ದರ್ಶನ್‌ಗೆ ಮತ್ತೊಂದು ಶಾಕ್‌ ಕೊಟ್ಟ ಕೋರ್ಟ್‌

TAGGED:Mother of three brutally murdered for leaving husband and having sex with another man
Share This Article
Facebook Twitter Copy Link Print
Previous Article ನಟ ದರ್ಶನ್‌ಗೆ ಮತ್ತೊಂದು ಶಾಕ್‌ ಕೊಟ್ಟ ಕೋರ್ಟ್‌
Next Article ಇನ್ಮುಂದೆ ರಾಜ್ಯಪಾಲರ ನಿವಾಸ ರಾಜಭವನವಲ್ಲ; ಹೊಸ ಹೆಸರು ಏನು?

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?