Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Karnataka politics ಮಂಗಳೂರು ಏರ್‌ಪೋರ್ಟ್‌ನಲ್ಲಿ ಡಿಕೆ-ಸಿದ್ದು ಬಣಗಳಿಂದ ಶಕ್ತಿ ಪ್ರದರ್ಶನ, ವೇಣುಗೋಪಾಲ್ ತಬ್ಬಿಬ್ಬು
ಕರ್ನಾಟಕದೇಶಪ್ರಮುಖ

Karnataka politics ಮಂಗಳೂರು ಏರ್‌ಪೋರ್ಟ್‌ನಲ್ಲಿ ಡಿಕೆ-ಸಿದ್ದು ಬಣಗಳಿಂದ ಶಕ್ತಿ ಪ್ರದರ್ಶನ, ವೇಣುಗೋಪಾಲ್ ತಬ್ಬಿಬ್ಬು

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಮಂಗಳೂರು: ಇಲ್ಲಿನ ಏರ್ಪೋರ್ಟ್‌ನಲ್ಲಿ ಡಿಕೆ ಬಣ ಹಾಗೂ ಸಿದ್ದರಾಮಯ್ಯ ಬಣದ ಶಕ್ತಿ ಪ್ರದರ್ಶನ ಕಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಬ್ಬಿಬ್ಬಗೊಂಡ ಪ್ರಸಂಗ ನಡೆಯಿತು.

ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಭಾಗಿಯಾಗಲು ವೇಣುಗೋಪಾಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಒಳರಾಜಕಾರಣ ಮತ್ತೊಮ್ಮೆ ಬಹಿರಂಗವಾಯಿತು.
ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬಂದ ವೇಣುಗೋಪಾಲ್ ಅವರನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದರು.

ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಪರ ಘೋಷಣೆಗಳೊಂದಿಗೆ ಕಾರ್ಯಕರ್ತರು ಭಾರೀ ಜಮಾವಣೆಗೊಂಡು ಬಣಶಕ್ತಿ ಪ್ರದರ್ಶನ ಮಾಡಿದರು.

ಡಿ.ಕೆ.ಶಿವಕುಮಾರ್ ಆಪ್ತ ಮಿಥುನ್ ರೈ ಹಾಗೂ ಅವರ ಬೆಂಬಲಿಗರ ನೇತೃತ್ವದಲ್ಲಿ ಡಿ.ಕೆ… ಡಿ.ಕೆ… ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ವೇಣುಗೋಪಾಲ್ ಎದುರಲ್ಲೇ ತಮ್ಮ ಶಕ್ತಿಯನ್ನು ತೋರಿಸಿದರು.

ಅಚಾನಕ್ ಆಗಿ ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ನೂಕಾಟ-ತಳ್ಳಾಟದಿಂದ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ವೇಣುಗೋಪಾಲ್ ತಮ್ಮ ವಾಹನಕ್ಕೆ ತಲುಪಲು ಹರಸಾಹಸಪಡಬೇಕಾಯಿತು.

ಇದಕ್ಕೆ ವೇಣುಗೋಪಾಲ್ ಯಾವುದೇ ಪ್ರತಿಕ್ರಿಯೆ ನೀಡದೆ, ಕೊಣಾಜೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡ್ತೀನಿ ಎಂದಷ್ಟೇ ಹೇಳಿದರು.

ಕೆಲವೇ ಗಂಟೆಗಳ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದರು. ಅವರೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ನಾಯಕರು ಆಗಮಿಸಿದರು. ಸಿದ್ದರಾಮಯ್ಯ ವಿಮಾನ ನಿಲ್ದಾಣದ ಹೊರಬಂದು ವಾಹನದತ್ತ ತೆರಳುತ್ತಿದ್ದಂತೆಯೇ, ಎಂಎಲ್‌ಸಿ ಐವನ್ ಡಿಸೋಜಾ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಸಿದ್ದು… ಸಿದ್ದು… ಪೂರ್ಣಾವಧಿ ಸಿದ್ದು! ಎಂದು ಘೋಷಣೆ ಕೂಗಿ ಸಿದ್ದರಾಮಯ್ಯ ಪರ ಬಣದ ಶಕ್ತಿ ಪ್ರದರ್ಶನ ಮಾಡಿದರು.

ಮದುವೆಯಾಗಿ 24 ಗಂಟೆಯೊಳಗೆ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ ಪತಿ -ಕಾರಣವೇನು?

TAGGED:DK-Siddu factions show strength at Mangalore airportVenugopal confused
Share This Article
Facebook Twitter Copy Link Print
Previous Article Today’s Horoscope ಇಂದಿನ ರಾಶಿ ಭವಿಷ್ಯ 03-12-2025, ಬುಧವಾರ, ಉದ್ಯೋಗಿಗಳಿಗೆ ಕಷ್ಟದ ಸಮಯ
Next Article ಇನ್ಮುಂದೆ ಸರ್ಕಾರಿ ಶಾಲೆಗಳ ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಸಿಗಲಿದೆ ಮೊಟ್ಟೆ, ಹಾಲು, ಬಾಳೆಹಣ್ಣು

Popular Posts

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

You Might Also Like

ಕರ್ನಾಟಕಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?