Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ: ಭಾರತ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಉದ್ಯಮವನ್ನು ನಿಯಂತ್ರಿಸಲು ‘ಆರೋಗ್ಯ ಭದ್ರತೆ ರಾಷ್ಟ್ರೀಯ ಭದ್ರತೆ ಸೆಸ್ ಮಸೂದೆ, 2025’ ಅನ್ನು ಪರಿಚಯಿಸಲಿದೆ.
ಗುಟ್ಕಾ, ಪಾನ್ ಮಸಾಲ, ಸಿಗರೇಟ್, ಜರ್ದಾ ಸೇರಿದಂತೆ ಅನಾರೋಗ್ಯಕರ ಸರಕುಗಳ ಪಟ್ಟಿಗೆ ಸೇರಿಸಲಾದ ತಂಬಾಕು ಉತ್ಪನ್ನಗಳ ಮೇಲಿನ ಗರಿಷ್ಠ ತೆರಿಗೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಅಬಕಾರಿ ತಿದ್ದುಪಡಿ ವಿಧೇಯಕ 2025, ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧೇಯಕ 2025 ಮಂಡಿಸಲಾಗಿದೆ. ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಾಗಿ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳು ಧರಣಿ ನಡೆಸಿವೆ. ಇದರ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಅಬಕಾರಿ ತಿದ್ದುಪಡಿ ವಿಧೇಯಕ 2025, ಆರೋಗ್ಯ ಭದ್ರತೆ ಹಾಗೂ ರಾಷ್ಟ್ರೀಯ ಭದ್ರತಾ ಸೆಸ್ ವಿಧೇಯಕ 2025 ಮಂಡಿಸಿದ್ದಾರೆ.