Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Musk’s AI statement raises fears ಎಐ ಎಫೆಕ್ಟ್‌ನಿಂದ 20 ವರ್ಷಗಳಲ್ಲಿ ಜನರಿಗೆ ಕೆಲಸವೇ ಇರಲ್ಲ: ಭಯ ಹೆಚ್ಚಿಸಿದ ಮಸ್ಕ್ ಹೇಳಿಕೆ
ಕರ್ನಾಟಕದೇಶಪ್ರಮುಖವಿದೇಶ

Musk’s AI statement raises fears ಎಐ ಎಫೆಕ್ಟ್‌ನಿಂದ 20 ವರ್ಷಗಳಲ್ಲಿ ಜನರಿಗೆ ಕೆಲಸವೇ ಇರಲ್ಲ: ಭಯ ಹೆಚ್ಚಿಸಿದ ಮಸ್ಕ್ ಹೇಳಿಕೆ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಸಮಾಜದ ಎಲ್ಲಾ ಕ್ಷೇತ್ರಗಳನ್ನೂ ಕೃತಕ ಬುದ್ಧಿಮತ್ತೆ (AI) ಆವರಿಸಿಕೊಳ್ಳುತ್ತಿರುವಾಗಲೇ ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಮಾತನಾಡಿದ್ದು, ಭವಿಷ್ಯದಲ್ಲಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ “ಪೀಪಲ್ ಬೈ ಡಬ್ಲೂಟಿಎಫ್‌” ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಎಲಾನ್‌ ಮಸ್ಕ್‌, “ಮುಂದಿನ 20 ವರ್ಷಗಳಲ್ಲಿ ಜನರಿಗೆ ಕೆಲಸವು ಕೇವಲ ಆಯ್ಕೆಯಾಗಿ ಉಳಿಯಲಿದೆ. ಜನರು ಏಳು ದಿನಗಳ ತೀವ್ರ ನಿದ್ರೆ- ಎಚ್ಚರ- ಕೆಲಸ- ಪುನರಾವರ್ತನೆ ವೇಳಾಪಟ್ಟಿಯನ್ನು ಅನುಸರಿಸಲಿದ್ದಾರೆ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ತಂತ್ರಜ್ಞಾನವು ಭಾರೀ ಬದಲಾವಣೆಗಳನ್ನು ತರಲಿದ್ದು, ಮುಂದಿನ 20 ವರ್ಷಗಳಲ್ಲಿ ಜನರ ಕೆಲಸದ ಪರಿಕಲ್ಪನೆ ಸಂಪೂರ್ಣವಾಗಿ ಬದಲಾಗಲಿದೆ. ಕೆಲಸ ಮಾಡುವುದು ಸಂಪೂರ್ಣವಾಗಿ ಐಚ್ಛಿಕವಾಗಿರಲಿದ್ದು, ಒಂದು ಹವ್ಯಾಸವಾಗಿ ಪರಿವರ್ತನೆಗೊಳ್ಳಲಿದೆ ಎಂದು ಎಲಾನ್‌ ಮಸ್ಕ್‌ ಭವಿಷ್ಯ ನುಡಿದಿದ್ದಾರೆ.
ಎಐ ಮತ್ತು ರೊಬೊಟಿಕ್ಸ್‌ ತಂತ್ರಜ್ಞಾನದಲ್ಲಿ ಕಂಡುಬರುವ ಪ್ರಗತಿಗಳು, ನಮ್ಮನ್ನು ಕೆಲಸ ಮಾಡುವುದು ಐಚ್ಛಿಕ ಎಂಬ ಹಂತಕ್ಕೆ ತರುತ್ತವೆ. ಈ ಹಂತದಲ್ಲಿ ನೀವು ನಿಮ್ಮ ತೋಟದಲ್ಲಿ ನಿಮ್ಮ ಸ್ವಂತ ತರಕಾರಿಗಳನ್ನು ಬೆಳೆಸಬಹುದು ಅಥವಾ ನೀವು ಅಂಗಡಿಗೆ ಹೋಗಿ ತರಕಾರಿಗಳನ್ನು ಖರೀದಿಸಬಹುದು” ಎಂದು ಬಿಲಿಯನೇರ್‌ ಉದ್ಯಮಿ ತಮಾಷೆಯಾಗಿ ಹೇಳಿದ್ದಾರೆ.
ಗ್ರೋಕ್ ಎಂಬ ಚಾಟ್‌ಬಾಟ್ ಹೊಂದಿರುವ xAI ಕಂಪನಿ, ಕೃತಕ ಬುದ್ಧಿಮತ್ತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿದೆ. ಇದರ ಆಧಾರದ ಮೇಲೆ ಮುಂದಿನ 20 ವರ್ಷಗಳಲ್ಲಿ ಎಐ ಮತ್ತು ರೋಬೊಟಿಕ್ಸ್‌ ತಂತ್ರಜ್ಞಾನ ನಮ್ಮನ್ನು ಹೇಗೆ ಆವರಿಸಿಕೊಳ್ಳಲಿದೆ ಎಂಬುದನ್ನು ನಾವು ಅಂದಾಜಿಸಬಹುದಾಗಿದೆ ಎಂದು ಮಸ್ಕ್‌ ಹೇಳಿದ್ದಾರೆ.

ಎಐ ಮತ್ತು ರೊಬೊಟಿಕ್ಸ್ ಮುಂದುವರೆದರೆ, ಕೆಲಸ ಮಾಡುವುದು ಐಚ್ಛಿಕವಾಗಿರುತ್ತದೆ ಮತ್ತು ಜನರಿಗೆ ಅವರು ಬಯಸುವ ಯಾವುದೇ ಸರಕು ಮತ್ತು ಸೇವೆಗಳು ಅತ್ಯಂತ ಸುಲಭವಾಗಿ ಸಿಗಲಿವೆ. ಭವಿಷ್ಯದಲ್ಲಿ AI ಮತ್ತು ರೊಬೊಟಿಕ್ಸ್ ಮನುಷ್ಯರನ್ನು ಸಂತೋಷಪಡಿಸಲು ಮಾಡಬೇಕಾದ ಎಲ್ಲಾ ಕೆಲಸಗಳನ್ನು ಮಾಡಲಿವೆ ಎಂದು ಟೆಸ್ಲಾ ಮುಖ್ಯಸ್ಥ‌ ಮಸ್ಕ್ ನುಡಿದರು.
ಒಂದು ನಿರ್ದಿಷ್ಟ ಹಂತದಲ್ಲಿ, ಎಐ ವಾಸ್ತವವಾಗಿ ಮಾನವರು ಯೋಚಿಸಬಹುದಾದ ಯಾವುದೇ ವಿಷಯದ ಬಗ್ಗೆ ಪರಿಹಾರವನ್ನು ನೀಡುವ ಸಾಮರ್ಥ್ಯ ಗಳಿಸಿರುತ್ತದೆ. ಆ ಸಮಯದಲ್ಲಿ, ಎಐ ಮತ್ತು ರೊಬೊಟಿಕ್ಸ್‌ಗಾಗಿ ಮನುಷ್ಯರು ಕೆಲಸ ಮಾಡುವ ಪರಿಸ್ಥಿತಿ ಉದ್ಭವವಾಗುತ್ತದೆ. ಮನುಷ್ಯರ ಕೆಲಸ ಮಾಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದಲ್ಲಿ ಭಾರೀ ಬದಲಾವಣೆ ಕಾಣಲಿದೆ ಎಂದು ಎಲಾನ್‌ ಮಸ್ಕ್‌ ಅಂದಾಜಿಸಿದ್ದಾರೆ.

ಎಐ ಮತ್ತು ರೋಬೋಟ್‌ಗಳು ಅಂತಿಮವಾಗಿ ಮನುಷ್ಯರಿಗೆ ಕೆಲಸವನ್ನು ಐಚ್ಛಿಕಗೊಳಿಸುತ್ತವೆ. ಹಣವು ಅಪ್ರಸ್ತುತವಾಗಲಿದ್ದು, ಬಡತನ ಅಸ್ತಿತ್ವದಲ್ಲಿರುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದರು.

ಎಐ ನಿರುದ್ಯೋಗ ಹೆಚ್ಚಳಕ್ಕೆ ಕಾರಣ ಆಗಲಿದೆ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿಬರುತ್ತಿರುವ ನಡುವೆಯೇ, ಎಲಾನ್‌ ಮಸ್ಕ್‌ ಅವರು 20 ವರ್ಷಗಳಲ್ಲಿ ಕೆಲಸದ ಪರಿಕಲ್ಪನೆಯೇ ಬದಲಾಗಲಿದೆ ಎಂಬ ಹೇಳಿಕೆ ಹೆಚ್ಚು ಗಮನ ಸೆಳೆದಿದೆ.

https://x.com/cb_doge/status/1995173915879198986?t=Rg2TQWq_KxBgd4cR0C2h2A&s=19

TAGGED:People will have no jobs after 20 years due to AI effect: Musk's statement raises fears
Share This Article
Facebook Twitter Copy Link Print
Previous Article ರಾಜಕೀಯ ಪ್ರವೇಶ ಕುರಿತು ಮಾಧುರಿ ದೀಕ್ಷಿತ್ ಹೇಳಿದ್ದೇನು?
Next Article RBIನ ಹೊಸ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ‘ಉಷಾ ಜಾನಕಿರಾಮನ್’ ನೇಮಕ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?