Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಣ್ಮರೆ; ಹುಡುಗಿಯರು ಎಲ್ಲಿಗೆ ಹೋದ್ರು?
ದೇಶಪ್ರಮುಖ

ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಣ್ಮರೆ; ಹುಡುಗಿಯರು ಎಲ್ಲಿಗೆ ಹೋದ್ರು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಭಾರತ-ನೇಪಾಳ ಗಡಿ ಪ್ರದೇಶದಿಂದ ಕಳೆದ ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ನೇಪಾಳ, ಚೀನಾ, ಬ್ರೆಜಿಲ್, ಸೌದಿ ಅರೇಬಿಯಾ ಸೇರಿದಂತೆ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಕಳ್ಳಸಾಗಣೆ ಸಿಂಡಿಕೇಟ್‌ಗಳು ಈ ಹೆಣ್ಣುಮಕ್ಕಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹುಡುಗಿಯರ ಪೈಕಿ ಕೇವಲ 12 ಹುಡುಗಿಯರನ್ನು ಇತ್ತೀಚೆಗೆ ರಕ್ಷಿಸಲಾಗಿದೆ. ಉಳಿದವರ ಸುಳಿವು ಇನ್ನೂ ಪತ್ತೆಯಾಗಿಲ್ಲ, ರಕ್ಷಿಸಲಾದ ಹುಡುಗಿಯರಲ್ಲಿ ನಾಲ್ವರು ಒಂದೇ ಕುಟುಂಬದವರು. ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುತ್ತಿರುವುದು ಗಡಿ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈಗ ಈ ವಿಚಾರ ಮಾನವ ಹಕ್ಕುಗಳ ಆಯೋಗವನ್ನು ತಲುಪಿದೆ. ಮಾನವ ಹಕ್ಕುಗಳ ವಕೀಲರಾದ ಎಸ್.ಕೆ. ಝಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಬಿಹಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ನಮ್ಮ ದೇಶದ ಜೊತೆಗೆ, ನೇಪಾಳ, ಚೀನಾ, ಬ್ರೆಜಿಲ್ ಮತ್ತು ಸೌದಿ ಅರೇಬಿಯಾದಲ್ಲಿ ಹೆಣ್ಣುಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಮೋತಿಹಾರಿಯ ಪಕ್ಕದಲ್ಲಿರುವ ಭಾರತ-ನೇಪಾಳ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಕಳ್ಳಸಾಗಣೆದಾರರು ಸಕ್ರಿಯರಾಗಿದ್ದಾರೆ.
ಬಿಹಾರದಲ್ಲಿ 6 ತಿಂಗಳಲ್ಲಿ 83 ಹುಡುಗಿಯರು ನಾಪತ್ತೆ
ಜುಲೈನಲ್ಲಿ ರಕ್ಸೌಲ್ ನಿಂದ 10 ಹುಡುಗಿಯರು, ರಾಮಗರ್ವಾದಿಂದ 3 ಹುಡುಗಿಯರು, ಆದಾಪುರದಿಂದ 4 ಹುಡುಗಿಯರು, ಆಗಸ್ಟ್ ನಲ್ಲಿ ರಕ್ಸೌಲ್ ಉಪವಿಭಾಗದ ಭೇಲಾಹಿ ಮತ್ತು ಕೌದಿಹಾರ್ ಸೇರಿದಂತೆ ವಿವಿಧ ಸ್ಥಳಗಳಿಂದ 18 ಹುಡುಗಿಯರು, ಸೆಪ್ಟೆಂಬರ್ ನಲ್ಲಿ ಇಡೀ ಉಪವಿಭಾಗದ ವಿವಿಧ ಸ್ಥಳಗಳಿಂದ ವಿವಾಹಿತ ಮಹಿಳೆ ಸೇರಿದಂತೆ 17 ಮಂದಿ, ಅಕ್ಟೋಬರ್ ನಲ್ಲಿ 15 ಹುಡುಗಿಯರು ಮತ್ತು ನವೆಂಬರ್ ನಲ್ಲಿ 15 ಹುಡುಗಿಯರು ಸೇರಿದಂತೆ ಒಟ್ಟು 83 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ವಕೀಲ ಎಸ್.ಕೆ. ಝಾ ಹೇಳಿದ್ದಾರೆ.

ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಆಮಿಷ ಒಡ್ಡಿ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ಚೀನಾ, ಸೌದಿ ಅರೇಬಿಯಾ, ದುಬೈ, ಗಲ್ಫ್ ರಾಷ್ಟ್ರಗಳು ಮತ್ತು ಅರ್ಜೆಂಟೀನಾದಂತಹ ದೇಶಗಳಿಗೆ ಮಕ್ಕಳನ್ನು ಹೆರವುದಕ್ಕೆ ಮತ್ತು ವೇಶ್ಯಾವಾಟಿಕೆ ಸೇರಿ ಹಲವು ಉದ್ದೇಶಗಳಿಗಾಗಿ ಕಳುಹಿಸಲಾಗುತ್ತಿದೆ. ಮದುವೆ ಮತ್ತು ದೇಹದ ಭಾಗಗಳ ಮಾರಾಟಕ್ಕಾಗಿ ಹುಡುಗಿಯರನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ಸಾಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ವಕೀಲ ಎಸ್.ಕೆ. ಝಾ ಅವರು ಈ ಪ್ರಕರಣವು ಅತ್ಯಂತ ಸೂಕ್ಷ್ಮ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಇದು ಪೊಲೀಸರ ಕಾರ್ಯಶೈಲಿ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆಯೋಗದಿಂದ ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಝಾ ಒತ್ತಾಯಿಸಿದರು.

ಡೆವಿಲ್ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ಘೋಷಣೆ

TAGGED:Girls disappear from Bihar borderwhere did more than 100 girls go?
Share This Article
Facebook Twitter Copy Link Print
Previous Article ಡೆವಿಲ್ ಚಿತ್ರದ ಟ್ರೇಲರ್ ರಿಲೀಸ್ ದಿನಾಂಕ ಘೋಷಣೆ
Next Article ಪತ್ನಿಯನ್ನ ಕೊಂದು ಮೃತದೇಹದ ಜೊತೆ ‘ಸೆಲ್ಫಿ’ ಕ್ಲಿಕ್ಕಿಸಿ ವಾಟ್ಸಪ್ ಸ್ಟೇಟಸ್’ಗೆ ಹಾಕಿದ ಪಾಪಿ ಪತಿ.!

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?