Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಮನೆಯಿಂದ ಜಾನ್ವಿ ಎಲಿಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ ಜೊತೆ ಉತ್ತಮ ಸ್ನೇಹ ಹೊಂದಿದ್ದ ಜಾನ್ವಿ ಈ ವಾರ ಮನೆಯಿಂದ ಹೊರ ಬಂದಿದ್ದಾರೆ.
ಕೊನೆಯಲ್ಲಿ ಧ್ರುವಂತ್, ಮಾಳು, ಜಾನ್ವಿ ಎಲಿಮಿನೇಷನ್ ಲಿಸ್ಟ್‌ನಲ್ಲಿ ಇದ್ದರು. ಆರಂಭದಲ್ಲಿ ಧ್ರುವಂತ್ ನಂತರ ಮಾಳು ಸೇವ್ ಆಗಿದ್ದರಿಂದ ಜಾನ್ವಿ ಮನೆಯಿಂದ ಔಟ್ ಆಗಿದ್ದಾರೆ.
ಜಾನ್ವಿ ಅವರು ಬಿಗ್ಬಾಸ್ ಮನೆಯಲ್ಲಿ ಸುಮಾರು 60ಕ್ಕೂ ಹೆಚ್ಚು ದಿನಗಳನ್ನು ಕರೆದಿದ್ದಾರೆ. ಅಶ್ವಿನಿ ಅವರೊಟ್ಟಿಗೆ ಬಹಳ ಆತ್ಮೀಯ ಗೆಳೆತನವನ್ನು ಜಾನ್ವಿ ಹೊಂದಿದ್ದರು. ಟಾಸ್ಕ್ಗಳಲ್ಲಿಯೂ ಸಹ ಚೆನ್ನಾಗಿ ಆಡಿದ್ದರು. ಉತ್ತಮ ಸಹ ಪಡೆದುಕೊಂಡಿದ್ದರು. ಕೆಲವರೊಟ್ಟಿಗೆ ಜಗಳ ಮಾಡಿದ್ದರು. ಆದರೆ ಒಟ್ಟಾರೆಯಾಗಿ ಚೆನ್ನಾಗಿಯೇ ಆಡಿದ್ದರು. ಆರಂಭದಲ್ಲಿ ಗೆಜ್ಜೆ ವಿಷಯದಲ್ಲಿ ಹಾಗೂ ಆ ಬಳಿಕ ವಾಹಿನಿಯ ಬಗ್ಗೆ ಆಡಿದ ಮಾತಿನಿಂದಾಗಿ ಸುದೀಪ್ ಅವರಿಂದಲೂ ಬೈಸಿಕೊಂಡಿದ್ದರು. ಆದರೆ ಬರ ಬರುತ್ತಾ ಎಲ್ಲವನ್ನೂ ಸುಧಾರಿಸಿಕೊಂಡಿದ್ದರು. ಆದರೆ ಕೊನೆಗೂ ಅವರು ಹೊರಗೆ ಬಂದಿದ್ದಾರೆ.