Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚೆನ್ನಾಗಿ ಓದು ಎಂದು ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ತಂಗಿ ಗದಗದ ಭೀಷ್ಮ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಂದ್ರಿಕಾ ನಡುವಿನಮನಿ(21) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಗಲಕೋಟೆ ಜಿಲ್ಲೆ ಶಿರೂರಿನ ಈಕೆ ಚಂದ್ರಿಕಾ ನಡುವಿನಮನಿ, ಗದಗ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು
ಚಂದ್ರಿಕಾ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಫಸ್ಟ್ ರ್ಯಾಂಕ್ ಪಡೆದಿದ್ದಳು. ಗ್ರಾಮದಲ್ಲಿ ಪ್ರತಿಭಾನ್ವಿತ ಎಂದು ಹೆಸರು ಪಡೆದಿದ್ಳು. ಇಂಜಿನಿಯರಿಂಗ್ನಲ್ಲಿ ಚೆನ್ನಾಗಿ ಓದಲಿ ಅಂತನೇ, ಹಾಸ್ಟೆಲ್ ಬಿಡಿಸಿ, ಪ್ರತ್ಯೇಕ ಮನೆ ಮಾಡಿಸಿದ್ದು, ಮನೆಯಲ್ಲಿ ಚಂದ್ರಿಕಾ ಸೇರಿ ನಾಲ್ವರು ಸ್ನೇಹಿತೆಯರು ಇದ್ದರು. ಆದ್ರೆ, ಇತ್ತೀಚೆಗೆ ಚಂದ್ರಿಕಾ ಸ್ನೇಹಿತರ ಜೊತೆ ಟೂರಿಗೆ ಹೋಗಿದ್ದಳು. ಹೀಗಾಗಿ ಇನ್ನೂ 6 ತಿಂಗಳು ಪರೀಕ್ಷೆ ಇದೆ, ನವೆಂಬರ್ 29 ರಂದು ರಾತ್ರಿ ಅಣ್ಣ ಚೇತನ್ ಕರೆಮಾಡಿ ಚನ್ನಾಗಿ ಓದು ಎಂದು ಬುದ್ದಿ ಮಾತು ಹೇಳಿದ್ದ. ಅಷ್ಟಕ್ಕೆ ಮನನೊಂದ ಚಂದ್ರಿಕಾ, ರಾತ್ರಿ 1.30ರ ಸುಮಾರಿಗೆ ಮನೆಯಿಂದ ಹೋಗಿ ಗದಗದ ಭೀಷ್ಮ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾಳೆ.