Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಂಗ್ರೆಸ್ ವರಿಷ್ಠರ ನಿರ್ದೇಶನಗಳನ್ನು ಅನುಸರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶನಿವಾರ ಉಪಹಾರ ಸಭೆಗೆ ಆಹ್ವಾನಿಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಮಹತ್ವದ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಲಿದೆ. ಬ್ರೇಕ್ ಫಾಸ್ಟ್‌ಗೆ ಬರುವಂತೆ ಸಿಎಂ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆಶಿ ಉಪಾಹಾರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಶತಾಯಗತಯ ಸಿಎಂ ಸ್ಥಾನಕ್ಕೇರಲೇಬೇಕು ಎನ್ನುವ ಉದ್ದೇಶದಿಂದ ಸಂಪುಟ ಸಚಿವರು ಸೇರಿದಂತೆ ಹಲವು ಶಾಸಕರನ್ನ ಡಿಕೆ ಶಿವಕುಮಾರ್ ಭೇಟಿಯಾಗಿ ಬೆಂಬಲ ಪಡೆಯುವ ಯತ್ನದಲ್ಲಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಆಪ್ತ ಬಣದವರ ಮೂಲಕವೂ ಸಿಎಂ ಮನವೊಲಿಕೆಗೆ ಯತ್ನಿಸಿದ್ರು. ಆದ್ರೆ ಯಾವುದೂ ಸಾಧ್ಯವಾಗದ ಹಿನ್ನೆಲೆ ಇದೀಗ ಖುದ್ದು ಸಿಎಂ ಜೊತೆ ನೇರ ನೇರ ಮಾತುಕತೆಗೆ ಡಿಸಿಎಂ ಮುಂದಾಗಿದ್ದಾರೆ.
https://www.newsics.com/2025/11/29/ar-rahman-sings-praises-for-kannada-cinema/