Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > AI Kamaal ನಿಜವಾಗ್ಲೂ ಜೈಲ್‌ನಲ್ಲಿರೋ ನಟ ದರ್ಶನ್‌ರನ್ನು ಶಿವರಾಜ್‌ಕುಮಾರ್, ಯಶ್, ಕಿಚ್ಚ ಸುದೀಪ್ ಭೇಟಿಯಾದ್ರಾ?! ವೀಡಿಯೊ ನೋಡಿ
ಕರ್ನಾಟಕಪ್ರಮುಖಮನರಂಜನೆವೈರಲ್

AI Kamaal ನಿಜವಾಗ್ಲೂ ಜೈಲ್‌ನಲ್ಲಿರೋ ನಟ ದರ್ಶನ್‌ರನ್ನು ಶಿವರಾಜ್‌ಕುಮಾರ್, ಯಶ್, ಕಿಚ್ಚ ಸುದೀಪ್ ಭೇಟಿಯಾದ್ರಾ?! ವೀಡಿಯೊ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಂದ ಬಳಿಕ ಜನರ ಯೋಚನಾ ಲಹರಿ ಬದಲಾಗುತ್ತಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಂತೂ ಫೋಟೋ, ಸ್ಥಳ, ಊರು, ವ್ಯಕ್ತಿಗಳನ್ನು ಗುರುತೇ ಸಿಗದಂತೆ ಮಾಡಲಾಗುತ್ತಿದೆ. ಕಂಡಿದ್ದೆಲ್ಲವೂ ನಿಜವೆನೋ ಎಂಬಂತೆ ಎಡಿಟ್ ಮಾಡಲು ಈ ತಂತ್ರಜ್ಞಾನದಲ್ಲಿ ಅವಕಾಶ ಇದೆ.

ಮನರಂಜನಾ ಉದ್ದೇಶದಿಂದ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಸ್ಯಾಂಡಲ್‌ವುಡ್‌ ಸ್ಟಾರ್ಸ್ ಭೇಟಿ ಮಾಡಿದರೆ ಹೇಗಿರುತ್ತದೆ ಎಂಬ ಝಲಕ್‌ನ್ಜು ಎಐ ಮೂಲಕ ತೋರಿಸಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಸ್ಯಾಂಡಲ್‌ವುಡ್ ಪ್ರಮುಖ ಸ್ಟಾರ್ ನಟರು ಹೋದರೆ ಹೇಗಿರುತ್ತದೆ. ಹೀಗೊಂದು ಕಲ್ಪನೆಯಡಿ ಎಐ ತಂತ್ರಜ್ಞಾನ, ನಟರ ಪೋಟೋ ಬಳಸಿ ಕಾಲ್ಪನಿಕ ದೃಶ್ಯಗಳನ್ನು ಎಡಿಟ್ ಮಾಡಿ ಕಟ್ಟಿಕೊಡಲಾಗಿದೆ. ಇದಕ್ಕೆ ದರ್ಶನ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ true_kannada_media ಹ್ಯಾಂಡಲ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ನಟ ದರ್ಶನ್ ಅವರು ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಜೈಲಿಗೆ ದರ್ಶನ್ ಅವರ ಭೇಟಿಗೆ ಇವರೆಲ್ಲರೂ ತೆರಳಿರುವಂತೆ ಫೋಟೋಗಳನ್ನು ರಚಿಸಿ ವಿಡಿಯೋ ಮಾಡಲಾಗಿದೆ.

ನಿಜವಾಗಿಯೂ ಈ ಶಿವಣ್ಣ, ಯಶ್ ಮತ್ತು ಸುದೀಪ್ ಅವರು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದಾರೇನೋ ಎಂಬಂತೆ ನೈಜ ರೀತಿಯಲ್ಲಿ ವಿಡಿಯೋ ಮೂಡಿ ಬಂದಿದ್ದು, ಎಲ್ಲರನ್ನೂ ಸೆಳೆಯುತ್ತಿದೆ. ಜೈಲಿಗೆ ಭೇಟಿ ನೀಡಿದಾಗ ವಿವಿಧ ಹಣ್ಣುಗಳ ಚೀಲವನ್ನು ಒಳಗಿನಿಂದ ಜಾಲರಿ ಮೂಲಕ ನಟ ದರ್ಶನ್ ಪಡೆದುಕೊಳ್ಳುತ್ತಾರೆ. ಕೆಲ ಹೊತ್ತು ನಾಲ್ವರೂ ನಿಂತು ಮಾತನಾಡುತ್ತಾರೆ. ಜೈಲಿನ ಒಳಗೆ ಕೇರ್‌ ಬೋರ್ಡ್ ಆಡುವುದು, ಜೈಲಿನ ಒಳಗೆ ಮುದ್ದೆ ಊಟ ಎಲ್ಲರೂ ಕೂಡಿ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಸಾಲದೆಂಬಂತೆ ಜೈಲಿನ ಒಳಗೆ ಕೆಲವು ಕಾಲ ದರ್ಶನ್ ಜತೆ ಕಳೆದು ಕೊನೆಗೆ ಮರಳುವಾಗ ದರ್ಶನ್ ಅವರತ್ತ ಕೈ ಬೀಸುವ ಸಹಜ ದೃಶ್ಯಗಳನ್ನು ಎಐ ಮೂಲಕ ಕಟ್ಟಿಕೊಡಲಾಗಿದೆ.

ಜೈಲಿನಲ್ಲಿ ಒಬ್ಬ ಕೈದಿಯನ್ನು ಭೇಟಿ ಮಾಡಲು ಸ್ನೇಹಿತರು ಹೋದರೆ ಏನೆಲ್ಲ ಆಗುತ್ತದೆ. ಅವರು ಒಟ್ಟಿಗೆ ಹೇಗೆಲ್ಲ ಕಾಣಬಹುದು ಎಂಬ ಪರಿಕಲ್ಪನೆಯನ್ನು ಇಲ್ಲಿ ಎಐನಿಂದ ಸೃಷ್ಟಿಸಲಾಗಿದೆ.

ಸಾಕಷ್ಟು ಮೆಚ್ಚುಗೆ ಕಮೆಂಟ್‌ಗಳು ಈ ವಿಡಿಯೋಗೆ ಬಂದಿವೆ. ಒಂದೇ ದಿನದಲ್ಲಿ 2.74 ಲಕ್ಷ ಲೈಕ್ಸ್‌ಗಳು, ನೂರಾರು ಕಮೆಂಟ್‌ಗಳು ಬಂದಿವೆ.
ಈ ವಿಡಿಯೋವಲ್ಲದೆ ಸ್ಯಾಂಡಲ್‌ವುಡ್‌ನ ಅಪ್ಪು, ಶಿವಣ್ಣ, ದರ್ಶನ್, ಯಶ್, ಸುದೀಪ್, ಧ್ರುವ ಸರ್ಜಾ, ರಿಶಬ್ ಶೆಟ್ಟಿ ಹೀಗೆ ಹಲವರ ಗುಂಪು ಮಕ್ಕಳಂತೆ ನಲಿದಾಡುತ್ತಾ, ಆಟವಾಡುವುದು, ಒಂದೇ ಬೈಕ್‌ನಲ್ಲಿ ತೆರಳುವುದು, ಕಾಫಿ ಅಂಗಡಿ ಮುಂದೆ ಬೈಕ್ ನಿಲ್ಲಿಸಿ ಗುಂಪಾಗಿ ಹರಟೆ ಹೊಡೆಯುವುದು, ಮಳೆಯಲ್ಲಿ ನೆನೆಯುವುದನ್ನು ಇದೇ ಎಐ ಮೂಲಕ ಕಟ್ಟಿಕೊಡಲಾಗಿದೆ.

ಅಪ್ಪು ಅವರಿಗೆ ಹೃದಯಾಘಾತವಾದ ಸಂದರ್ಭ, ಚಿತ್ರರಂಗದ ಸ್ನೇಹಿತರು ಆತಂಕದಲ್ಲಿ ಆಸ್ಪತ್ರೆಯತ್ತ ದೌಡಾಯಿಸುವುದು ಸೇರಿದಂತೆ ಸಿನಿಮಾ ರಂಗದವರ ಕುರಿತ ಒಂದಷ್ಟು ನೈಜ ಘಟನೆಗಳಿಗೆ ಸಂಬಂಧಿಸಿದ ಘಟನೆಗಳಿಗೆ ಎಐ ಟಚ್ ಕೊಡಲಾಗಿದೆ. ಕಾಲ್ಪನಿಕ ದೃಶ್ಯಗಳ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ.

https://www.instagram.com/reel/DRjN39SknOA/?igsh=MXhnNHNta3dkdTBleQ==

TAGGED:Did ShivarajkumarKichcha Sudeep meet actor Darshan in jail?! Watch the videoyash
Share This Article
Facebook Twitter Copy Link Print
Previous Article Viral video ಮದುವೆಯಾದರೂ ಪ್ರಿಯಕರನ ಜತೆ ಬಾತ್‌ರೂಮ್‌ ಲವ್: ಪತಿ ಮಾಡಿದ ವೀಡಿಯೋದಿಂದ ಸಾಬೀತಾಯ್ತು ಪತ್ನಿಯ ಅಕ್ರಮ ಸಂಬಂಧ
Next Article ಎರಡು ಕಾರ್ ಗಳ ನಡುವೆ ಡಿಕ್ಕಿ : ಐವರು ಸ್ಥಳದಲ್ಲೇ ಸಾವು

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?