Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಾಂಗ್ರೆಸ್ ಕುರ್ಚಿ ಕಿತ್ತಾಟಕ್ಕೆ ಸಂಬಂಧಿಸಿದಂತೆ, ನಟಿ ರಮ್ಯಾ ರಮ್ಯಾ ಪ್ರತಿಕ್ರಿಯೆಸಿದ್ದಾರೆ..
ಈ ಬಗ್ಗೆ ಮಾತನಾಡಿರುವ ರಮ್ಯ, ‘ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್ ಗಳು ನಿರ್ಧಾರ ಮಾಡ್ತಾರೆ. ಯಾರಾದ್ರು ನಗರ ಓಕೆ, ಒಟ್ಟಿನಲ್ಲಿ ರಾಜ್ಯಕ್ಕೆ ಒಳ್ಳೇಯದಾಗಬೇಕು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ವೇಣುಗೋಪಾಲ್ ಇದ್ದಾರೆ ನಿರ್ಧಾರ ಮಾಡ್ತಾರೆ. ಯಾರನ್ನ ಮಾಡಿದ್ರು ಓಕೆ. ‘ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಯಾಕೆ’ ಅನ್ನೋ ಪ್ರಶ್ನೆಗೆ, ‘ಅದೇ ರಾಜಕೀಯ’ ಎಂದು ನಕ್ಕ ನಟಿ ರಮ್ಯಾ ‘ಎಲ್ಲಾ ನಾಯಕರಿಗೂ ಅರ್ಹತೆ ಇದೆ. ಯಾರಾದ್ರೂ ಓಕೆ , ಹೈಕಮಾಂಡ್ ತೀರ್ಮಾನ ಮಾಡಲಿದೆ.. ‘ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ದೆಹಲಿಯಲ್ಲಿ ಇಂದು ತೀರ್ಮಾನವಾಗಲಿದೆ ಬಂಡೆ ಕುರ್ಚಿ ಭವಿಷ್ಯ?
ಕರ್ನಾಟಕದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಅಧಿಕಾರ ಸಂಘರ್ಷ ತಾರಕಕ್ಕೆ ಏರಿರುವ ನಡುವೆಯೇ ಇಂದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿಯಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಸಭೆಯಲ್ಲಿ ಡಿಸಿಎಂ ಅವರ ಸಿಎಂ ಭವಿಷ್ಯ ತೀರ್ಮಾನವಾಗಲಿದೆ. 28 ಅಥವಾ 29 ಕ್ಕೆ ಸಿಎಂ ಹಾಗೂ ಡಿಸಿಎಂಗೆ ದೆಹಲಿಗೆ ಹೈಕಮಾಂಡ್ ಬುಲಾವ್ ನೀಡುವ ಸಾಧ್ಯತೆ ಇದ್ದು, ಡಿಸೆಂಬರ್ ಅಧಿವೇಶನಕ್ಕೆ ಮುಂಚೆ ಹೈಕಮಾಂಡ್ ತನ್ನ ನಿರ್ಧಾರ ತಿಳಿಸಲಿದೆ ಎನ್ನಲಾಗಿದೆ.
ಇಬ್ಬರನ್ನೂ ಕೂಡ ಒಂದೇ ವೇದಿಕೆಗೆ ತಂದು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಇವತ್ತಿನ ಸಭೆಯಲ್ಲಿ ಕರ್ನಾಟಕ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಶಾಸಕರ ಪರೇಡ್, ನಾಯಕರ ವಿರುದ್ದ ಆರೋಪಗಳ, ಸಿಎಂ ಮತ್ತು ಡಿಸಿಎಂ ನಡುವಿನ ಅಸಮಧಾನ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ, ಕೆ ಸಿ ವೇಣುಗೋಪಾಲ ಚರ್ಚೆ ನಡೆಸಲಿದ್ದಾರೆ.