Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಿವೇದಿತಾ ಗೌಡ ವಿಚ್ಚೇದನ ಬಳಿಕ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಪ್ರತಿ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ತನ್ನ ಪೋಸ್‌ಗೆ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿವೆ ಅಂತ ಗೊತ್ತಿದ್ದರೂ ಅದ್ಯಾವುದಕ್ಕೂ ನಿವೇದಿತಾ ಗೌಡ ತಲೆಕೆಡಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಬಿಟ್ಟಿದ್ದಾರೆ.
ಇದೀಗ ನಿವೇದಿತಾ ಗೌಡ ಮೆನ್ ಆರ್ ಫ್ರಮ್ ಮಾರ್ಸ್, ವಿಮೆನ್ ಆರ್ ಫ್ರಮ್ ವೀನಸ್’ ಪುರುಷರು ಮಂಗಳ ಗ್ರಹದಿಂದ ಬಂದವರು, ಮಹಿಳೆಯರು ಶುಕ್ರ ಗ್ರಹದಿಂದ ಬಂದವರು) ಎಂಬ ಪುಸ್ತಕದೊಂದಿಗೆ ಕಾಣಿಸಿಕೊಂಡಿದ್ದಾರೆ.
ಆದರೆ ಇದೀಗ ಫುಲ್ ಡ್ರೆಸ್ನಲ್ಲಿ ಮಿಂಚಿರೋ ನಿವೇದಿತಾ ಗೌಡ ಇನ್ಸ್ಟಾಗ್ರಾಮ್ನಲ್ಲಿ ಪುಸ್ತಕವೊಂದನ್ನು ಶೇರ್ ಮಾಡಿ ಗಮನ ಸೆಳೆದಿದ್ದಾರೆ.
ಜಾನ್ ಗ್ರೇ ಅವರು ಬರೆದಿರುವ ಈ ಪುಸ್ತಕವನ್ನು ನಿವೇದಿತಾ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ಅವರು ಕೇವಲ ಫೋಟೋಪೋಸ್ಗಾಗಿ ಶೇರ್ ಮಾಡಿದ್ದಾರೋ ಅಥವಾ ಓದುವುದಕ್ಕಾಗಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಪುಸ್ತಕದ ಬಗ್ಗೆ ಈಕೆಯ ಫ್ಯಾನ್ಸ್ಗೆ ಕುತೂಹಲ ಹೆಚ್ಚಾಗಿದೆ.
ಇನ್ನು ಈ ಪುಸ್ತಕದ ಕುರಿತು ಹೇಳುವುದಾದರೆ, ಜಾನ್ ಗ್ರೇ ಅವರು 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಒತ್ತಡದ ಸಂದರ್ಭಗಳಿಗೆ ಮಹಿಳೆಯರು ಮತ್ತು ಪುರುಷರು ಪ್ರತಿಕ್ರಿಯಿಸುವ ವಿಭಿನ್ನ ವಿಧಾನಗಳ ಪರಿಭಾಷೆಯಲ್ಲಿ ಪ್ರತಿಯೊಂದು ಲಿಂಗವನ್ನು ಅರ್ಥಮಾಡಿಕೊಳ್ಳಬಹುದು ಎಂದು ಪುಸ್ತಕವು ಪ್ರತಿಪಾದಿಸುತ್ತದೆ. ಇದನ್ನು ನಿವೇದಿತಾ ಗೌಡ ಯಾಕೆ ಓದುತ್ತಿದ್ದಾರೆ, ಮತ್ತೊಂದು ಮದುವೆಗೂ ಮುನ್ನ ಇದನ್ನೆಲ್ಲಾ ಓದಿ ಅರ್ಥ ಮಾಡಿಕೊಳ್ಳುವ ಹಂಬಲನಾ ಎನ್ನುವುದು ನೆಟ್ಟಿಗರ ಪ್ರಶೆಯಾಗಿದೆ.
https://www.instagram.com/p/DRcPBOoEdt6/?img_index=5&igsh=NmJkNGo3cWh2OGo5