newsics.com
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ಚೀನಾದೊಂದಿಗಿನ ಭಾರತದ ಗಡಿ ವಿವಾದದಲ್ಲಿ ಮೂರನೇ ವ್ಯಕ್ತಿಯ ಪಾತ್ರವನ್ನು ತಳ್ಳಿಹಾಕಿದ್ದಾರೆ. ನೆರೆಹೊರೆಯ ದೇಶಗಳಾದ ಚೀನಾ ಮತ್ತು ಭಾರತದ ನಡುವೆ ಸಮಸ್ಯೆ ಇರುವುದು ಸತ್ಯ. ಆದರೆ, ಅದನ್ನು ಬಗೆಹರಿಸಿಕೊಳ್ಳಲು ನಾವೇ ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.
ಟೋಕಿಯೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳ ಸರಣಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಜೈಶಂಕರ್, “ಭಾರತ ಮತ್ತು ಚೀನಾ ನಡುವಿನ ನಿಜವಾದ ಸಮಸ್ಯೆ ಏನೆಂಬುದನ್ನು ಗುರುತಿಸಲು ಮತ್ತು ಅದನ್ನು ಬಗೆಹರಿಸಿಕೊಳ್ಳಲು ನಾವು ಇತರ ದೇಶಗಳ ಮಧ್ಯಸ್ಥಿಕೆಯನ್ನು ಬಯಸುತ್ತಿಲ್ಲ” ಎಂದು ಜೈಶಂಕರ್ ಹೇಳಿದ್ದಾರೆ.
ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಟೋಕಿಯೋಗೆ ತೆರಳಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್, ಚೀನಾದೊಂದಿಗಿನ ಭಾರತದ ಸಂಬಂಧ ಚೆನ್ನಾಗಿಲ್ಲ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.