newsics.com
ಮುಂಬೈ: ನಟಿ ದೀಪಿಕಾ ಪಡುಕೋಣೆ ಅವರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಗಿದ್ದು, ಅದರ ಫೋಟೋಗಳು ವೈರಲ್ ಆಗಿವೆ.
ಎಂಟನೆಯ ತಿಂಗಳಿನಲ್ಲಿ ಹೊಸ್ತಿಲಿನಲ್ಲಿರುವ ದೀಪಿಕಾ ಅವರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಗಿದೆ ಎನ್ನಲಾಗಿದೆ.ಆದರೆ ಈ ಫೋಟೋ ವೈರಲ್ ಆಗ್ತಿದ್ದಂತೆ ಇದು ಫೇಕ್ ಪೋಟೋ ಎಡಿಟ್ ಎಂದು ಕೂಡ ಹೇಳಲಾಗ್ತಿದೆ.ಆದರೆ ಈ ಕುರಿತಾಗಿ ಅಧಿಕೃತ ಮಾಹಿತಿ ಇಲ್ಲ.
ಸಾಮಾನ್ಯವಾಗಿ ಗರ್ಭಧರಿಸಿದ ಮೇಲೆ ಹೆಣ್ಣುಮಕ್ಕಳು ತೂಕ ಹೆಚ್ಚಿಸಿಕೊಳ್ಳುವುದು ಮಾಮೂಲು. ಆದರೆ ದೀಪಿಕಾ ಹೊಟ್ಟೆ ಮಾತ್ರ ಬಂದಿರುವುದು ಬಿಟ್ಟರೆ, ಮೊದಲಿನ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದರು. ಇದರ ಸೀಕ್ರೇಟ್ ಏನು ಎಂದು ಫ್ಯಾನ್ಸ್ ಪ್ರಶ್ನಿಸಿದ್ದರು.
ಮಗುವಾದ ಮೇಲೆ ದೀಪಿಕಾ ಚಿತ್ರರಂಗ ತೊರೆಯಲಿದ್ದಾರೆಯೇ ಎನ್ನುವ ಅನುಮಾನ ಬಂದಿದೆ. ಇದರಿಂದ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ಕೂಡ ತಲ್ಲಣಗೊಂಡಿದೆ.