Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉತ್ತರಪ್ರದೇಶ: ಮಾಜಿ ಪ್ರೆಯಸಿಗೆ ವಿವಾಹಿತ ವ್ಯಕ್ತಿಯೊಬ್ಬ, ಬಲವಂತವಾಗಿ ಕಿಸ್ ಮಾಡಲು ಹೋಗಿ ತನ್ನ ನಾಲಿಗೆಯನ್ನೇ ತುಂಡರಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ನಿವಾಸಿ, 35 ವರ್ಷದ ಚಂಪಿ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದರೂ, ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಯುವತಿಗೆ ಆಕೆಯ ಪೋಷಕರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಮದುವೆ ನಿಶ್ಚಯವಾದ ನಂತರ ಯುವತಿಯು ಚಂಪಿಯಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು.
ಈ ಮಧ್ಯೆ ಆಕೆ ಸೋಮವಾರ ಮಧ್ಯಾಹ್ನದ ವೇಳೆಗೆ ಮನೆ ಸಮೀಪದ ಕೆರೆಯ ಬಳಿ ಹೋಗಿದ್ದಾಳೆ. ಆಕೆ ಒಬ್ಬಳೇ ಹೋಗುತ್ತಿರುವುದನ್ನು ನೋಡಿದ ಆರೋಪಿ, ಆಕೆಯನ್ನು ಕೆರೆಯ ಬಳಿಗೆ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯನ್ನು ತಬ್ಬಿಕೊಂಡ ಆತ ಆಕೆಗೆ ಒತ್ತಾಯಪೂರ್ವಕವಾಗಿ ಕಿಸ್ ಮಾಡುವುದಕ್ಕೆ ಮುಂದಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಹಿಳೆ ವಿರೋಧಿಸಿದಾಗ ಇಬ್ಬರ ಮಧ್ಯೆ ಕಿತ್ತಾಟವಾಗಿದೆ. ಆತ ತನ್ನ ಕಿರುಕುಳ ಮುಂದುವರಸಿದ್ದು, ಆಕೆಗೆ ಕಿಸ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆ ಆತನ ನಾಲಗೆಯನ್ನು ಗಟ್ಟಿಯಾಗಿ ಕಚ್ಚಿ ಕತ್ತರಿಸಿದ್ದಾಳೆ. ಇದರಿಂದ ವಿವಾಹಿತನ ನಾಲಗೆ ಕತ್ತರಿಸಲ್ಪಟ್ಟು ರಕ್ತ ಸೋರಿದ್ದು, ಆತ ನೋವಿನಿಂದಲೇ ಜೋರಾಗಿ ಕಿರುಚಿದ್ದಾನೆ. ಆತನ ಕಿರುಚಾಟ ಕೇಳಿ ಅಲ್ಲಿದ್ದಅಕ್ಕಪಕ್ಕದ ಮನೆಯ ಜನ ಓಡಿ ಬಂದಿದ್ದು, ಬಳಿಕ ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ನಂತರ ಆತನನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.