Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿದ ಅಶ್ವಿನಿ ಗೌಡ ಹಾಗೂ ಜಾಹ್ನವಿ – ತಾಳ್ಮೆ ಕಳೆದುಕೊಂಡ ಬಿಗ್ ಬಾಸ್
ಮನರಂಜನೆ

ಬಿಗ್ ಬಾಸ್ ಮನೆಯಲ್ಲಿ ನಿಯಮ ಮುರಿದ ಅಶ್ವಿನಿ ಗೌಡ ಹಾಗೂ ಜಾಹ್ನವಿ – ತಾಳ್ಮೆ ಕಳೆದುಕೊಂಡ ಬಿಗ್ ಬಾಸ್

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಅಶ್ವಿನಿ ಗೌಡ ಹಾಗೂ ಆ್ಯಂಕರ್ ಜಾನ್ವಿ ಕಳೆದ ವಾರವಷ್ಟೇ ಸುದೀಪ್ ಅವರಿಂದ ಬೈಸಿಕೊಂಡಿದ್ದರು. ಇದಕ್ಕೆ ಕಾರಣ ಆಗಿದ್ದು ಚೇಂಜಿಂಗ್ ರೂಂನಲ್ಲಿ ಮೈಕ್ ಇಲ್ಲದೆ ಮಾತನಾಡಿದ್ದು. ಸುದೀಪ್ ಬೈದು ಕೆಲವೇ ಗಂಟೆಗಳಲ್ಲಿ ಅಶ್ವಿನಿ ಹಾಗೂ ಜಾನ್ವಿ ಮತ್ತದೇ ತಪ್ಪು ಮಾಡಿದ್ದಾರೆ. ಸಾಮಾನ್ಯವಾಗಿ ತಪ್ಪು ಮಾಡಿದಾಗ ಕೆಲವರಿಗೆ ಪಶ್ಚಾತಾಪ ಆಗುತ್ತದೆ, ನಾಚಿಕೆ ಆಗುತ್ತದೆ. ಆದರೆ, ಇವರ ಮುಖದಲ್ಲಿ ಅದ್ಯಾವುದೂ ಕಾಣಿಸಲೇ ಇಲ್ಲ. ಇಬ್ಬರು ಹಾಯಾಗಿ ನಗುತ್ತಿದ್ದರು.

ಬಿಗ್ ಬಾಸ್ ಮನೆಯ ಒಳಗೆ ಯಾರೂ ಕೂಡ ಪಿಸುಧ್ವನಿಯಲ್ಲಿ ಮಾತನಾಡುವಂತಿಲ್ಲ. ಆದರೆ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಆರಂಭದಿಂದಲೂ ಈ ನಿಯಮವನ್ನು ಮುರಿಯುತ್ತಿದ್ದಾರೆ. ಡ್ರೆಸಿಂಗ್ ರೂಮ್​​ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್​​ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ.

 

ಡ್ರೆಸಿಂಗ್ ರೂಮ್​ಗೆ ಹೋಗಿ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂದು ಕಿಚ್ಚ ಸುದೀಪ್ ಅವರು ಕಳೆದ ವಾರಾಂತ್ಯದ ಸಂಚಿಕೆಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಅದರಿಂದ ಬಿಗ್ ಬಾಸ್ ಕೋಪಗೊಂಡರು. ‘50 ದಿನ ಕಳೆದರೂ ಸದಸ್ಯರು ಮನೆಯ ನಿಯಮ ಮುರಿಯುತ್ತಿದ್ದಾರೆ. ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆ ಮೀರಿಯೂ ಮತ್ತೆ ಪಿಸುದನಿಯಲ್ಲಿ ಮಾತನಾಡಿದ್ದಾರೆ’ ಎಂದು ಬಿಗ್ ಬಾಸ್ ಹೇಳಿದರು.

 

ತಪ್ಪು ಮಾಡಿದ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರ ವಿಡಿಯೋ ಪ್ರದರ್ಶಿಸಲಾಯಿತು. ಆ ವಿಡಿಯೋ ಪ್ಲೇ ಆಗುವಾಗಲೂ ಅಶ್ವಿನಿ ಗೌಡ ಮತ್ತು ಜಾಹ್ನವಿ ನಗುತ್ತಿದ್ದರು. ಅವರ ಮುಖದಲ್ಲಿ ತಪ್ಪು ಮಾಡಿದ ಭಾವನೆಯೇ ಕಾಣುತ್ತಿರಲಿಲ್ಲ. ಇದರಿಂದ ಬಿಗ್ ಬಾಸ್​​ ಇನ್ನಷ್ಟು ಅಸಮಾಧಾನಗೊಂಡರು. ‘ಈ ತಪ್ಪು ಮಾಡಿದ್ದಕ್ಕೆ ಹಾಗೂ ಉದ್ದಟತನ ತೋರಿದ್ದಕ್ಕೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ’ ಎಂದು ಬಿಗ್ ಬಾಸ್ ಘೋಷಿಸಿದರು.

https://www.newsics.com/2025/11/18/india-signs-deal-with-us-to-supply-10-of-cooking-gas/

TAGGED:#bigboss12 #colorskannada #ashwini #janvi #sudeep
Share This Article
Facebook Twitter Copy Link Print
Previous Article ಭಾರತಕ್ಕೆ ಶೇ. 10ರಷ್ಟು ಅಡುಗೆ ಅನಿಲ ಪೂರೈಸಲು ಅಮೆರಿಕ ಜತೆ ಒಪ್ಪಂದ
Next Article ರಷ್ಯಾದೊಂದಿಗೆ ವ್ಯವಹಾರ ನಡೆಸುವ ದೇಶದ ಮೇಲೆ ಕಠಿಣ ನಿರ್ಬಂಧ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read
ಮನರಂಜನೆಪ್ರಮುಖ

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read
ಪ್ರಮುಖಮನರಂಜನೆ

ದಳಪತಿ ವಿಜಯ್ ಡಿವೋರ್ಸ್​ ಕೇಸ್: ಆಗಸ್ಟ್​​ 7ಕ್ಕೆ ಖುದ್ದು ಹಾಜರಾಗಲು ದಂಪತಿಗೆ ಕೋರ್ಟ್ ಸೂಚನೆ

2 Min Read
ಪ್ರಮುಖಮನರಂಜನೆ

ಸ್ಕಾಲರ್​​ಶಿಪ್​ ಕೊಡೋಕೆ ರಶ್ಮಿಕಾ ಪ್ರಯಣಿಸಿದ ಕಾರು ಯಾವುದು?;! 5 ಸ್ಟಾರ್ ಹೋಟೆಲ್​​ ರೂಮ್​ನಂತಿರುವ ಇದರ ಬೆಲೆ ಎಷ್ಟು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?