Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸೀರೆ ವಿಚಾರಕ್ಕೆ ವರ ಮದುವೆ ದಿನವೇ ವಧುವನ್ನ ಕೊಂದ ಘಟನೆ ಗುಜರಾತ್‌ನಲ್ಲಿ ನಡೆದಿದೆ.ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್. ಪ್ರೀತಿ ಕೊಂದ ಕೊಲೆಗಾರ ಸಜನ್ ಬರಯ್ಯ. ಸೋನಿ ಮತ್ತು ಸಜನ್ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತಿದ್ದರು.
ಮನೆಯವರ ವಿರೋಧದ ನಡುವೆಯೂ ಒಂದೂವರೆ ವರ್ಷದಿಂದ ಒಟ್ಟಿಗೆ ವಾಸವನ್ನೂ ಮಾಡ್ತಿದ್ರು. ಮನೆಯವರೆಲ್ಲಾ ಒಪ್ಪಿ ನಿನ್ನೆಗೆ ಮದುವೆಯನ್ನೂ ನಿಶ್ಚಯ ಮಾಡಿದ್ರು. ಮದುವೆಗೂ ಮುನ್ನ ನಡೆಯುವ ಎಲ್ಲಾ ಶಾಸ್ತ್ರಗಳೂ ನೆರವೇರಿದ್ವು. ಮದುವೆ ನಡೆಯೋಕೆ ಇನ್ನ ಕೆಲವೇ ಗಂಟೆಗಳು ಬಾಕಿ ಇತ್ತು. ಅಷ್ಟರಲ್ಲೇ ಸೋನಿಯನ್ನ ವರ ಸಜನ್ ಕೊಂದು ಹಾಕಿದ್ದಾನೆ.
ಸೀರೆಯನ್ನ ಕೊಳ್ಳುವಾಗ ಸೀರೆ ಮತ್ತು ಹಣದ ವಿಚಾರಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಮನೆಗೆ ಹಿಂದುರಿಗಿದಾಗ ಮನೆಯಲ್ಲಿ ರಾಡ್‌ನಿಂದ ಹಲ್ಲೆ ಮಾಡಿದ್ದು,ತಲೆಗೆ ಗಂಭೀರವಾದ ಪೆಟ್ಟು ಬಿದ್ದು ಸೋನಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ವರ ಸಜನ್, ತನ್ನ ನೆರೆಹೊರೆಯವರ ಜೊತೆಗೂ ಜಗಳವಾಡಿದ್ದಾನೆ.. ಮನೆಯಲ್ಲಿದ್ದ ವಸ್ತುಗಳನ್ನ ಧ್ವಂಸ ಮಾಡಿದ್ದಾನೆ. ಸದ್ಯ ವರ ಸಜನ್ ವಿರುದ್ಧ ಭಾವ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2025/11/17/moderate-rain-likely-in-some-districts-of-the-state/