Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಅಂದರೆ ನಗರದ ಹಾಗೂ ಹೊರವಲಯದ ಜನರಿಗೂ ಅಚ್ಚುಮೆಚ್ಚು. ದೊಡ್ಡ ಗಣಪನ ದರ್ಶನ ಪಡೆದು, ಒಂದೆರೆಡು ಸೇರು ಕಡ್ಲೆಕಾಯಿ ಖರೀದಿ ಮಾಡಿ, ಜಾತ್ರೆಯನ್ನು ಸಂಭ್ರಮಿಸಿ ಖುಷಿಪಡುತ್ತಾರೆ. ಈ ವರ್ಷದ ಪರಿಷೆಗೆ ಇಂದು ಚಾಲನೆ ಸಿಗಲಿದ್ದು, ನವೆಂಬರ್ 21ರ ವರೆಗೆ ನಡೆಯಲಿದೆ.
ಪರಿಷೆಗೆ ಈಗಾಗಲೇ ಬಸವನಗುಡಿಯ ಬೀದಿಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ರಸ್ತೆಯ ಎರಡು ಬದಿಗಳಲ್ಲಿ ಬಡವರ ಬಾದಾಮಿ ಕಡಲೆಕಾಯಿಯ ರಾಶಿ ಹಾಜರ್ ಆಗಿದೆ. ಪ್ರತಿ ವರ್ಷ ಎರಡು ದಿನಕ್ಕೆ ಮುಗಿಯುತ್ತಿದ್ದ ಕಡಲೆಕಾಯಿ ಪರಿಷೆಯನ್ನು ಇದೇ ಮೊದಲ ಬಾರಿಗೆ ಐದು ದಿನಗಳ ಕಾಲ ನಡೆಸಲು ಮುಂದಾಗಿದ್ದು, ಈಗಾಗಲೇ ಬೇರೆ ಬೇರೆ ಭಾಗಗಳಿಂದ ಆಗಮಿಸಿರುವ ವ್ಯಾಪಾರಿಗಳು ತಮ್ಮ ತಮ್ಮ ಜಾಗ ಗುರುತಿಸಿ ಕಡಲೆಕಾಯಿ ರಾಶಿ ಹಾಕಿದ್ದಾರೆ.
ಕಡಲೆಕಾಯಿಪರಿಷೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಸೇರಿ ನೆರೆ ರಾಜ್ಯಗಳ ವ್ಯಾಪಾರಿಗಳು ಕೂಡ ಆಗಮಿಸಿದ್ದು, ವಿವಿಧ ಬಗೆಯ ಕಡಲೆಕಾಯಿಗಳು ಸಿಟಿಮಂದಿಯ ನಾಲಿಗೆ ರುಚಿ ಹೆಚ್ಚಿಸಲು ಸಜ್ಜಾಗಿವೆ
. ಇನ್ನು ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಕೂಡ ಭದ್ರತೆಗೆ ಸಜ್ಜಾಗಿದ್ದು, ದೇಗುಲದ ಸುತ್ತಮುತ್ತ, ಪರಿಷೆ ನಡೆಯುವ ಬೀದಿಗಳಲ್ಲಿ ಈಗಾಗಲೇ ನಿಗಾ ಇಟ್ಟಿದ್ದಾರೆ. ಇಡೀ ರಸ್ತೆಯಲ್ಲಿ ಬಗೆ ಬಗೆಯ ಮಳಿಗೆಗಳು ತಲೆ ಎತ್ತಿದ್ದು, ಜಾತ್ರೆ ಸಂಭ್ರಮಕ್ಕೆ ಮೆರುಗು ತುಂಬಲು ಸಜ್ಜಾಗಿವೆ.
https://www.newsics.com/2025/11/17/groom-kills-bride-on-wedding-day-over-saree-dispute/