Subscribe ನ್ಯೂಸಿಕ್ಸ್ ಕನ್ನಡ NewsicsKannada/YouTubenewsics.com
ಬೀದರ್: ಜೈಲು ಸಿಬ್ಬಂದಿಯ ನಿರ್ಲಕ್ಷ್ಯ, ಸಹಖೈದಿಗಳ ಕಿರುಕುಳದಿಂದ ಜೈಲಿನಲ್ಲಿ ವಿಚಾರಣಾಧೀನ ಖೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನ ಹುಮನಾಬಾದ್ ನಲ್ಲಿ ನಡೆದಿದೆ.
ಖಂಡಪ್ಪ ಮೇತ್ರೆ (46), ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಬಸವಕಲ್ಯಾಣ ತಾಲೂಕಿನ ಗೌರ್ ಗ್ರಾಮದ ನಿವಾಸಿಯಾಗಿದ್ದ ಖಂಡಪ್ಪ ಮೇತ್ರಿ. ಏಪ್ರಿಲ್ 14, 2025ರಂದು ನಡೆದ ತನ್ನ ಸ್ವಂತ ತಾಯಿ ಸುಂದರಾಬಾಯಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಹೆತ್ತತಾಯಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಹುಲಸೂರ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರಿಯರು ದೂರು ನೀಡಿದ್ದರು. ಈ ವಿಚಾರಣೆ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳಿನಿಂದ ಹುಮನಾಬಾದ್ ಜೈಲಿನಲ್ಲಿದ್ದ ಆರೋಪಿ.
ಜೈಲಿನಲ್ಲಿ ಸಹ ಕೈದಿಗಳು ದಿನನಿತ್ಯ ಕಿರುಕುಳ ಕೊಡುತ್ತಿದ್ದರು ಇದರಿಂದ ಬೇಸತ್ತು ನಿನ್ನೆ ಸಂಜೆ ಮರವೇರಿ ಬಿಲ್ದಿಂಗ್‌ನಿಂದ ಜಿಗಿದು ಮೃತಪಟ್ಟಿದ್ದಾರೆ. ಸಹ ಕೈದಿಗಳ ಕಿರುಕುಳ ಕುರಿತು ಜೈಲರ್ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜೈಲು ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಮೃತನ ಮಗಳು ಆರೋಪಿಸಿದ್ದಾರೆ.
ಸದ್ಯದಲ್ಲೇ ದುಬಾರಿಯಾಗಲಿವೆ ಮೊಬೈಲ್ ಬೆಲೆ; ಏಕೆ ದುಬಾರಿಯಾಗುತ್ತವೆ?