Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರಾಯಚೂರು: ರಾಜ್ಯದಲ್ಲೆಡೆ ಸೈಬರ್ ವಂಚಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಜನರು ಕೋಟ್ಯಾಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ರಾಯಚೂರಿನ ವ್ಯಕ್ತಿಯೋರ್ವರಿಗೆ ಬರೋಬ್ಬರಿ 59 ಲಕ್ಷ ರೂ. ಹಣವನ್ನ ಪಂಗನಾಮಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ರಾಯಚೂರಿನ ಶರಣಬಸವ ಎನ್ನುವವರು ಆನ್ಲೈನ್ ಟ್ರೇಡಿಂಗ್ನಲ್ಲಿ ಆಸಕ್ತಿ ಹೊಂದಿದ್ದು, ಹೇಗೆಲ್ಲ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ಸಿಗುತ್ತೆ ಎಂಬ ವಿಡಿಯೋವನ್ನು ಫೇಸ್ಬುಕ್ನಲ್ಲಿ ನೋಡುತ್ತಿದ್ದರು.
ಇದೇ ವೇಳೆ ಸೈಬರ್ ವಂಚಕರಿಂದ ಶರಣಬಸವ ಅವರ ವಾಟ್ಸ್ಯಾಪ್ಗೆ ಒಂದು ಮೆಸೆಜ್ ಬಂದಿದೆ. ಆ ಲಿಂಕ್ನ ಇವರು ಓಪನ್ ಮಾಡಿದ್ದು, ಬಳಿಕ ಶರಣಬಸವ ಅವರಿಗೆ ಅಪರಿಚಿತರಿಂದ ವಾಟ್ಸ್ಯಾಪ್ ಕರೆ ಬಂದಿದೆ. ಆರೋಪಿಗಳು Paytm Money ಕಂಪೆನಿಯ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗುವ ಆಮಿಷ ಒಡ್ಡಿದ್ದಾರೆ. ಅವರ ಮಾತು ನಂಬಿದ್ದ ಶರಣಬಸವ, ಮೊದಲು 500 ರೂ. ಹಣ ವರ್ಗಾಯಿಸಿದ್ದರು. ಬಳಿಕ ಹೆಚ್ಚಿನ ಹಣ ಹಾಕುತ್ತಾ ಹೋಗಿದ್ದು, ಅಧಿಕ ಲಾಭಾಂಶವೂ ಸಿಕ್ಕಿದೆ. ಹೀಗಾಗಿ ದೊಡ್ಡ ಮೊತ್ತದ ಹಣವನ್ನು ಶರಣಬಸವ ಹೂಡಿಕೆ ಮಾಡಲು ಶುರುಮಾಡಿದ್ದಾರೆ. ಅಲ್ಲಿಂದ ಆರೋಪಿಗಳ ನವರಂಗಿ ಆಟ ಆರಂಭವಾಗಿದೆ.
ಒಟ್ಟು 59 ಲಕ್ಷ ರೂ. ಹಣವನ್ನು ಶರಣಬಸವ ಅವರು ವಂಚಕರ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಲಾಭಾಂಶವೂ ಬರುತ್ತಿಲ್ಲ, ಅಸಲೂ ಸಿಗುತ್ತಿಲ್ಲ ಎಂಬ ಸ್ಥಿತಿ ಎದುರಾದಾಗ ತಮಗೆ ಕರೆ ಮಾಡಿದ್ದ ನಂಬರ್ನ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಈ ವೇಳೆ ವಂಚಕರು ಸಂಪರ್ಕಕ್ಕೆ ಸಿಗದ ಹಿನ್ನಲೆ ತಾವು ಮೋಸ ಹೋಗಿರೋದು ಶರಣಬಸವ ಅವರಿಗೆ ಅರಿವಾಗಿದೆ. ಹೀಗಾಗಿ ಘಟನೆ ಸಂಬಂಧ ರಾಯಚೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.