Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕರೆಂಟ್ ಬಿಲ್ ಪಾವತಿಸಿಲ್ಲ ಎಂದು ಮನೆಯೊಂದಕ್ಕೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಯುವಕ ಸಿಟ್ಟಿಗೆದ್ದು, ಸುಮಾರು 7 ಟ್ರಾನ್ಸ್‌ಫಾರ್ಮರ್‌ಗಳಿಂದಲೇ ಫ್ಯೂಸ್ ತೆಗೆದು ಇಡೀ ಊರನ್ನೇ ಕತ್ತಲಿನಲ್ಲಿ ಇಟ್ಟಂತಹ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಘಟನೆಯ ಬಳಿಕ ಸ್ಥಳೀಯ ವಿದ್ಯುತ್ ಪ್ರಸರಣ ನಿಗಮಕ್ಕೆ ಹಲವು ದೂರುಗಳು ಬಂದಿವೆ. ಆದರೆ ನಾವು ಲೈನ್‌ಗಳನ್ನು ತಪಾಸಣೆ ಮಾಡಿದಾಗ ಯಾವುದೇ ಲೈನ್‌ಗಳಲ್ಲಿ ಸಮಸ್ಯೆ ಕಾಣಲಿಲ್ಲ, ನಂತರ ಟ್ರಾನ್ಸ್‌ಫಾರ್ಮರ್‌ಗಳ ತಪಾಸಣೆ ನಡೆಸಿದಾಗ ಅಲ್ಲಿ ಟ್ರಾನ್ಸ್‌ಫಾರ್ಮರ್‌ಗಳಿಂದ ಫ್ಯೂಸ್ ತೆಗೆದಿರುವುದು ಬೆಳಕಿಗೆ ಬಂದಿದೆ.
ನಂತರ ಆ ಪ್ರದೇಶದಲ್ಲಿ ಹುಡುಕಟ ನಡೆಸಿದ್ದಾಗ ಟ್ರಾನ್ಸ್‌ಫಾರ್ಮರ್‌ಗಳ ಕೆಳಗೆಯೇ ಫ್ಯೂಸ್‌ಗಳು ಬಿದ್ದಿರುವುದು ಕಂಡು ಬಂದಿದೆ. ಅವುಗಳಲ್ಲಿ ಕೆಲವು ಫ್ಯೂಸ್‌ಗಳು ಹಾನಿಗೊಳಗಾಗಿದ್ದವು. ನಂತರ ಬೇರೆ ಫ್ಯೂಸ್‌ಗಳನ್ನು ಬಳಸಿ ರಾತ್ರಿ 8 ಗಂಟೆ ಸುಮಾರಿಗೆ ಕರೆಂಟ್ ಸಮಸ್ಯೆಯನ್ನು ಸರಿಪಡಿಸಿದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ಸುತ್ತಮುತ್ತಲಿನ ಜನರಲ್ಲಿ ಕೇಳಿದಾಗ ವ್ಯಕ್ತಿಯೋರ್ವ ಟ್ರಾನ್ಸ್‌ಫಾರ್ಮರ್‌ನಿಂದ ಫ್ಯೂಸ್ ತೆಗೆದಿರುವುದನ್ನು ನೋಡಿದ್ದಾಗಿ ಹೇಳಿದ್ದಾರೆ. ನೆಲ್ಲಿಕುಳಿ ಪ್ರದೇಶದ ವ್ಯಕ್ತಿಯನ್ನು ಕರೆದು ವಿಚಾರಣೆಗೊಳಪಡಿಸಿದಾಗ ಆತನೇ ಕೃತ್ಯವೆಸಗಿರುವುದು ತಿಳಿದು ಬಂದಿದೆ.
https://www.newsics.com/2025/11/16/three-youths-arrested-for-harassing-foreign-women/