Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹತ್ತು ವರ್ಷದಿಂದ ಕೋಮಾದಲ್ಲಿದ್ದ ಮಗಳಿಗೆ ತಾಯಿ ಅವರ ಡ್ಯಾನ್ಸ್ ಥೆರಪಿ ಮೂಲಕ ಚೇತರಿಸಿಕೊಂಡ ಘಟನ ಚೀನಾದ ಯಾಂಗ್ ಫಾಂಗ್ ನಡೆದಿದೆ. ಈ ಬೆಳವಣಿಗೆ ವೈದ್ಯರನ್ನೇ ಬೆಚ್ಚಿಬೀಳಿಸಿದೆ
ವೈದ್ಯರೇ ಕೈಚೆಲ್ಲಿದ್ದರೂ, ಒಬ್ಬ ತಾಯಿ ತನ್ನ ಮಗಳನ್ನು 10 ವರ್ಷಗಳ ಕೋಮಾದಿಂದ ಹೊರತರಲು ಮಾಡಿದ ಪ್ರಯತ್ನ ಎಲ್ಲರ ಮನಕರಗುವಂತಿದೆ.
ಸುಮಾರು ಹತ್ತು ವರ್ಷಗಳ ಹಿಂದೆ, ಯಾಂಗ್ ಫಾಂಗ್ ಗಂಭೀರ ಅನಾರೋಗ್ಯದಿಂದ ಕೋಮಾಕ್ಕೆ ಜಾರಿದ್ದಳು. ಆಕೆ ಮತ್ತೆ ಎಚ್ಚರಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದರು. ಚಿಕಿತ್ಸೆಯನ್ನು ನಿಲ್ಲಿಸುವಂತೆಯೂ ಸಲಹೆ ನೀಡಿದ್ದರು. ಆದರೆ, ತಾಯಿ ಶಿಯಾವೋ ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ಆಕೆ ತನ್ನ ಮಗಳನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿ, ನಂತರ ಮನೆಗೆ ಕರೆತಂದು ತಾನೇ ಪುನರ್ವಸತಿ ಚಿಕಿತ್ಸೆಯನ್ನು ಪ್ರಾರಂಭಿಸಿದರು.ತಾಯಿ ಅವರ ಡ್ಯಾನ್ಸ್ ಥೆರಪಿ ಮೂಲಕ ಯುವತಿ ದೀರ್ಘಕಾಲದ ಕೋಮಾದಿಂದ ಚೇತರಿಸಿಕೊಂಡಿದ್ದು, ಇದಕ್ಕೆ ಕಾರಣವಾಗಿದ್ದು ಆಕೆಯ ತಾಯಿ ಶಿಯಾವೋ ಕ್ಸುಫೈ ಅವರ ವಿಶಿಷ್ಟ ಡ್ಯಾನ್ಸ್ ಥೆರಪಿ.