Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪ್ರಮುಖ ಟ್ಯೂಶನ್ ಸಂಸ್ಥೆಯಾಗಿರುವ ಆಕಾಶ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಪ್ರಯತ್ನ ಮುಂದುವರಿಸಿದೆ. ಆಕಾಶ್ ಎಜುಕೇಶನ್ ಸರ್ವಿಸ್ನ ಮಾಲಕಸಂಸ್ಥೆಯಾದ ಬೈಜೂಸ್ ಅನ್ನು ಖರೀದಿಸಲು ಮಣಿಪಾಲ್ ಗ್ರೂಪ್ ಎರಡನೇ ಬಿಡ್ ಸಲ್ಲಿಸಿದೆ.
ಬೈಜೂಸ್ನ ಸಂಕಷ್ಟ ಪರಿಹಾರಕರ ಬಳಿ ಇಒಐ ದಾಖಲೆಗಳನ್ನು ಸಲ್ಲಿಸಿದೆ.ರಂಜನ್ ಪೈ ಮಾಲಕತ್ವದ ಮಣಿಪಾಲ್ ಗ್ರೂಪ್ ಬೈಜೂಸ್ ಖರೀದಿಗೆ ಬಿಡ್ ಸಲ್ಲಿಸಿದ್ದು ಇದು ಎರಡನೇ ಬಾರಿ. ಬಿಡ್ಡರ್ಗಳ ಕೊರತೆಯಿಂದಾಗಿ ಆರ್ಪಿಯವರು ಹೊಸದಾಗಿ ಬಿಡ್ಗಳನ್ನು ಆಹ್ವಾನಿಸಿದ್ದರು. ಇದಕ್ಕೆ ನಿನ್ನೆ (ನ. 13) ಕೊನೆಯ ದಿನವಾಗಿತ್ತು.
ಬೈಜೂಸ್ ಸಂಸ್ಥೆ ವಿಪರೀತ ಸಾಲ ಹೊಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಗೋಪಾಯ ಹುಡುಕಲಾಗಿದೆ. ಅದರಂತೆ ಬೈಜೂಸ್ನ ಆಸ್ತಿಗಳನ್ನು ಮಾರಿ ಸಾಲ ತೀರಿಸಲು ರೆಸಲ್ಯೂಶನ್ ಪ್ರೊಫೆಷನಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರೇ ಈಗ ಬಿಡ್ಗೆ ಆಹ್ವಾನಿಸಿರುವುದು.
ಮಣಿಪಾಲ್ ಗ್ರೂಪ್ಗೆ ಬೈಜೂಸ್ಗಿಂತ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯ ಮೇಲೆ ಕಣ್ಣು ನೆಟ್ಟಿದೆ