Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನವದೆಹಲಿ:ಅಫ್ಘಾನಿಸ್ತಾನದ ಖ್ಯಾತ ಕ್ರಿಕೆಟಿಗ ರಶೀದ್ ಖಾನ್ ಮತ್ತೊಂದು ಮದುವೆಯಾಗಲಿದ್ದಾರೆ ಎಂಬುದು ಕೆಲ ದಿನಗಳಿಂದ ಕೇಳಿ ಬರುತ್ತಿತ್ತು.
ಅದಕ್ಕೆ ಪುಷ್ಟಿ ಎನ್ನುವಂತೆ ಖಾನ್ ಚಾರಿಟಿ ಫೌಂಡೇಶನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮಹಿಳೆಯ ಜೊತೆಗೆ ರಶೀದ್ ಕಾಣಿಸಿಕೊಂಡಿದ್ದರು. ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಸ್ವತಃ ರಶೀದ್ ಈ ಕುರಿತು ಮೌನ ಮುರಿದಿದ್ದಾರೆ.
ಆಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ ತಮ್ಮ 2ನೇ ಮದುವೆ ಕುರಿತು ಸ್ಪಷ್ಟೆನೆ ನೀಡಿದ್ದಾರೆ. ತಮ್ಮ ಗೆಳತಿ ಹಾಗೂ ಅಫ್ಘಾನಿಸ್ತಾನದ ಮಾಡೆಲ್ ರನ್ನು ವಿವಾಹವಾಗಿರುವುದಾಗಿ ರಶೀದ್ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರಶೀದ್ ತಮ್ಮ ಎರಡನೇ ಮದುವೆ (ನಿಕಾಹ್) ಕೆಲವು ತಿಂಗಳ ಹಿಂದೆ, ಆಗಸ್ಟ್ 2, 2025 ರಂದು ನಡೆದಿರುವುದನ್ನು ದೃಢಪಡಿಸಿದ್ದಾರೆ. ‘ನಾನು ಯಾವಾಗಲೂ ಕನಸು ಕಂಡಿರುವ ಪ್ರೀತಿ, ಶಾಂತಿ ಮತ್ತು ಪಾಲುದಾರಿಕೆಯನ್ನು ಹೊಂದಿರುವ ಮಹಿಳೆಯನ್ನು ವಿವಾಹವಾಗಿರುವುದಾಗಿ ರಶೀದ್ ಖಾನ್ ಬರೆದುಕೊಂಡಿದ್ದಾರೆ.
‘ಆಗಸ್ಟ್ 2, 2025 ರಂದು, ನನ್ನ ಜೀವನದಲ್ಲಿ ಹೊಸ, ಅರ್ಥಪೂರ್ಣ ಅಧ್ಯಾಯವನ್ನು ಪ್ರಾರಂಭಿಸಿದೆ. ನಾನು ಯಾವಾಗಲೂ ಕನಸು ಕಂಡಿದ್ದ ಪ್ರೀತಿ, ಶಾಂತಿ ಮತ್ತು ಒಡನಾಟವನ್ನು ಹೊಂದಿರುವ ಮಹಿಳೆಯನ್ನು ನಾನು ಮದುವೆಯಾದೆ. ಇತ್ತೀಚೆಗೆ ನಾನು ನನ್ನ ಹೆಂಡತಿಯನ್ನು ದತ್ತಿ ಕಾರ್ಯಕ್ರಮಕ್ಕೆ ಕರೆದೊಯ್ದೆ. ಅಂತಹ ಸರಳ ವಿಷಯದಿಂದ ಊಹೆಗಳನ್ನು ಮಾಡುವುದು ದುರದೃಷ್ಟಕರ.
ಸತ್ಯವು ತುಂಬಾ ಸರಳವಾಗಿದೆ. ಅವಳು ನನ್ನ ಹೆಂಡತಿ, ನಾವು ಮರೆಮಾಡಲು ಏನೂ ಇಲ್ಲದೆ ಒಟ್ಟಿಗೆ ನಿಲ್ಲುತ್ತೇವೆ. ದಯೆ, ಬೆಂಬಲ ಮತ್ತು ತಿಳುವಳಿಕೆಯನ್ನು ತೋರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ರಶೀದ್ ಖಾನ್ ಪೋಸ್ಟ್ ನಲ್ಲಿ ಬರೆದಿದ್ದಾರೆ.