Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಿಜಾಬ್ ಧರಿಸದೇ ವರ್ಕೌಟ್ ಮಾಡಿದ್ದಕ್ಕಾಗಿ ಟೆಕ್ವಾಂಡೋ ಅಥ್ಲೀಟ್ ಕೋಚ್ ಒಬ್ಬರನ್ನು ಇರಾನ್‌ನ ಅಧಿಕಾರಿಗಳು ಬಂಧಿಸಿದ್ದಾರೆ. ಇರಾನ್‌ನಲ್ಲಿ ಹಿಜಾಬ್ ಇಲ್ಲದೇ ಮಹಿಳೆಯರು ಹೊರಗೆ ಬರುವಂತಿಲ್ಲ.
ಮಹಿಳೆಯರ ಸ್ವಾಂತಂತ್ರ್ಯದ ಮೇಲೆ ಹಲವು ಶರತ್ತುಗಳನ್ನು ಹೇರಿರುವ ಇರಾನ್ ಈಗ ಟೇಕ್ವಾಂಡೋ ಕ್ರೀಡಾಪಟು ಮತ್ತು ಜಿಮ್ನಾಸ್ಟಿಕ್ಸ್ ತರಬೇತುದಾರೆ ಹನಿಹ್ ಶರಿಯಾತಿ ರೌಡ್‌ಪೋಷ್ಟಿ ಎಂಬುವರನ್ನು ಬಂಧಿಸಿದೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಭದ್ರತಾ ಪಡೆಗಳು ಟೆಹ್ರಾನ್‌ನಲ್ಲಿ ವಾಸಿಸುವ ಹನಿಹ್ ಶರಿಯಾತಿ ರೌಡ್‌ಪೋಷ್ಟಿ ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿವೆ ಎಂದು ವರದಿಯಾಗಿದೆ.
ಹೆಂಗಾವ್ ಮಾನವ ಹಕ್ಕುಗಳ ಸಂಸ್ಥೆಗೆ ದೊರೆತ ಮಾಹಿತಿಯ ಪ್ರಕಾರ, ಹನಿಹ್ ಶರಿಯಾತಿ ರೌಡ್‌ಪೋಷ್ಠಿಯನ್ನು ನವೆಂಬರ್ 9, 2025 ರ ಭಾನುವಾರ ಸಂಜೆ ಗುಪ್ತಚರ ಸಚಿವಾಲಯದ ಏಜೆಂಟರು ಟೆಹ್ರಾನ್‌ನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕ ಪ್ರದರ್ಶನದ ಸಮಯದಲ್ಲಿ ಸಾರ್ವಜನಿಕ ವಸ್ತ್ರ ಸಂಹಿತೆಗಳನ್ನು ಪಾಲಿಸದ ಕಾರಣ ಆಕೆಯನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಆಕೆಯ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಅವರ ಕುಟುಂಬಕ್ಕೆ ಹತ್ತಿರವಿರುವ ಮೂಲವೊಂದು ವರದಿ ಮಾಡಿದೆ.