Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ.
ಎಲಿಮಿನೇಷನ್ ಭೀತಿಯಲ್ಲಿದ್ದ ಕಾಕ್ರೋಚ್ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್ ಪವರ್ ಬಳಸಿಕೊಂಡು ಸೇವ್ ಆದರು. ಆದರೆ, ಕೊನೆಯಲ್ಲಿ ಚಂದ್ರಪ್ರಭ ಹೊರಬರಬೇಕಾಯಿತು.
ಕಿಚ್ಚನ ಪಂಚಾಯ್ತಿ ವೇಳೆ ಚಂದ್ರಪ್ರಭ ಡಲ್ ಆಗಿದ್ದರು. ಸುದೀಪ್ ಎದುರೇ ಎದ್ದು ಹೊರನಡೆದಿದ್ದರು. ಚಂದ್ರಪ್ರಭನ ನಡೆಗೆ ಸ್ಪರ್ಧಿಗಳು ಶಾಕ್ ಆದರು. ಕೊನೆಗೆ ಮನವೊಲಿಸಿ ಮನೆಯೊಳಗಡೆ ಕರೆತಂದರು. ಗಿಲ್ಲಿ ಮೇಲೆ ಕೈಮಾಡಿ ವಿವಾದಕ್ಕೆ ಸಿಲುಕಿದ್ದ ರಿಷಾ ಅವರನ್ನು ಮನೆಯಲ್ಲೇ ಉಳಿಸಿಕೊಳ್ಳಬೇಕಾ ಅಥವಾ ಬೇಡವಾ ಎಂಬ ಬಗ್ಗೆ ಸ್ಪರ್ಧಿಗಳಿಂದ ಬಿಗ್ ಬಾಸ್ ಅಭಿಪ್ರಾಯ ಕೇಳುತ್ತಿದ್ದರು.
ಅದರಲ್ಲಿ ಪಾಲ್ಗೊಂಡಾಗ, ಯಾಕೆ ಹೊರಹೋಗಿದ್ದು ಎಂದು ಚಂದ್ರಪ್ರಭಗೆ ಸುದೀಪ್ ಅವರು ಪ್ರಶ್ನೆ ಮಾಡಿದರು. ನನಗೆ ಮನೆಯಲ್ಲಿ ಇರೋದಕ್ಕೆ ಇಷ್ಟ ಇಲ್ಲ ಎಂದು ಚಂದ್ರಪ್ರಭ ಮಾತನಾಡಿದರು. ಇದನ್ನು ನಾವು ತೀರ್ಮಾನಿಸಲ್ಲ. ಜನರಿಗೆ ನೀವು ಇಷ್ಟ ಆಗಲಿಲ್ಲ ಅಂದ್ರೆ, ಅವರೇ ಹೊರಗೆ ಕಳಿಸುತ್ತಾರೆ ಎಂದು ಸುದೀಪ್ ಸಮಾಧಾನಪಡಿಸಿದ್ದರು. ಆದರೆ, ಕೊನೆಗೆ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ.
https://www.newsics.com/2025/11/10/mass-prayers-at-kempegowda-airport/