Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉಗ್ರಂ ಚಿತ್ರ ಖ್ಯಾತಿಯ ಮಂಜು ಅವರಿಗೆ ಕೊನೆಗೂ ಕಂಕಣ ಭಾಗ್ಯ ಕೂಡ ಬಂದಿದೆ. ಅಪ್ಪನ ಆಸೆಯಂತೆ ಉಗ್ರಂ ಮಂಜು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿಂಪಲ್ ಆಗಿಯೇ ಇವರ ನಿಶ್ಚಿತಾರ್ಥ ಆಗಿದೆ. ಹಿರಿಯರು ಹಾಗೂ ಸ್ನೇಹಿತರು ಸಮ್ಮುಖದಲ್ಲಿಯೇ ಉಂಗುರು ಬದಲಿಸಿಕೊಂಡಿದ್ದಾರೆ. ಆ ಖುಷಿಯನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ಇವರು ಸಿನಿಮಾದವರು ಅಲ್ವೇ ಅಲ್ಲ. ಎಲ್ಲೂ ನೋಡಿದ ನೆನಪು ಬಹುಶಃ ಯಾರಿಗೂ ಇಲ್ಲ. ಆದರೆ, ಇವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ.
ಇನ್ಸ್ಟಾಗ್ರಾಮ್ ಅಲ್ಲಿ ಸಂಧ್ಯಾ ಖುಷಿ ಅಂತಲೇ ಹೆಸರಿನ ಒಂದು ಅಕೌಂಟ್ ಕೂಡ ಇದೆ. ಇದರಲ್ಲಿ ಸಂಧ್ಯಾ ಅವರ ಸುಂದರವಾದ ಫೋಟೋಗಳೂ ಇವೆ. ವಿಡಿಯೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಇವೆಲ್ಲ ನೋಡಿದ್ರೆ ಇವರು ಬಹುಶಃ ಮಾಡೆಲ್ ಇರಬೇಕು ಅನಿಸುತ್ತದೆ. ಆ ರೀತಿಯ ಫೊಟೋಗಳೇ ಇಲ್ಲಿವೆ.
ಆದರೆ, ಸಂಧ್ಯಾ ಖುಷಿ ತಾವು ಮಾಡೆಲ್ ಅಂತ ಎಲ್ಲೂ ಬರೆದುಕೊಂಡಿಲ್ಲ. ಬದಲಾಗಿ Transplant co-ordinator ಅಂತಲೇ ಬರೆದುಕೊಂಡಿದ್ದಾರೆ. ಸ್ಪರ್ಶ್ ಆಸ್ಪತ್ರೆಯಲ್ಲಿ ಇವರು ಅಡ್ಮಿನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋ ಮಾಹಿತಿನೂ ಇದೆ. ಇದು ಬಿಟ್ಟರೆ, ಸದ್ಯ ಸಂಧ್ಯಾ ಖುಷಿ ಅವರ ಬಗ್ಗೆ ಹೆಚ್ಚಿಗೆ ಮಾಹಿತಿ ಸಿಗೋದಿಲ್ಲ.
ಅದು ಬಿಟ್ಟರೆ, ಸಂಧ್ಯಾ ಖುಷಿ ಹಾಗೂ ಉಗ್ರಂ ಮಂಜು ಎಂಗೇಜ್ ಆಗಿದ್ದಾರೆ. ಮುಂದಿನ ವರ್ಷ ಇವರ ಮದುವೆ ಅನ್ನುವ ಮಾಹಿತಿ ಇದೆ. ಜನವರಿ ತಿಂಗಳಲ್ಲಿಯೇ ಇವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತಲೇ ಹೇಳಬಹುದು. ಆದರೆ ಇವರದ್ದು ಲವ್ ಅಥವಾ ಅರೇಂಜ್ಡ್ ಮ್ಯಾರೇಜ್ ಅನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಸಂಧ್ಯಾ ಖುಷಿ ತಮ್ಮ ಕೆಲಸದ ಬಗ್ಗೆನೂ ಹೇಳಿಕೊಂಡಿದ್ದಾರೆ. ಸ್ಪರ್ಶ ಆಸ್ಪತ್ರೆಯಲ್ಲಿ ತಾವೊಬ್ಬ Transplant co-ordinator ಅನ್ನೋದನ್ನು ಹೇಳಿದ್ದಾರೆ. ಹಾಗೇನೆ ಒಳ್ಳೆ ಪ್ರೊಡೆಕ್ಟ್ ಇದ್ದರೆ ಅದನ್ನ ಪ್ರೋಮೋಟ್ ಮಾಡ್ತಾರೆ ಅನಿಸುತ್ತದೆ. ಇವರೇ ಹಂಚಿಕೊಂಡ ಒಂದು ವಿಡಿಯೋದಲ್ಲಿ ಹೇರ್ ಆಯಿಲ್ ಬಳಕೆ ಮಾಡಿ, ಅದರ ಫಲಿತಾಂಶ ಹೇಗಿದೆ ಅನ್ನೋದನ್ನು ಹೇಳಿದ್ದಾರೆ ಅಂತಲೇ ಹೇಳಬಹುದು.