Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಉತ್ತಮ ನಿದ್ರೆ ಪಡೆಯಲು ಕೆಲವರು ಧ್ಯಾನ ಮಾಡುವುದು, ಮಲಗುವಾಗ ಕಣ್ಣಿಗೆ ಮಾಸ್ಕ್ ಧರಿಸುವುದು, ಈ ಅಭ್ಯಾಸಗಳನ್ನು ಪಾಲಿಸುತ್ತಿರುತ್ತಾರೆ. ಇದಲ್ಲದೆ ಉತ್ತಮ ನಿದ್ರೆ ಪಡೆಯಲು ಸಾಕ್ಸ್ ಧರಿಸುವುದು ಕೂಡ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ, ಹೌದು ಮಲಗುವ ಮುನ್ನ ಕಾಲಿಗೆ ಸಾಕ್ಸ್ ಧರಿಸುವುದರಿಂದ ಮಗುವಿನಂತೆ ಆರಾಮವಾಗಿ ನಿದ್ರೆ ಮಾಡಬಹುದಂತೆ.
ವರ್ಜೀನಿಯಾದ ನ್ಯಾಷನಲ್ ಸ್ಲೀಪ್ ಫೌಂಡೇಶನ್‌ನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಸಾಕ್ಸ್ ಧರಿಸಿ ಮಲಗುವ ಜನರು ವೇಗವಾಗಿ ನಿದ್ರಿಸುತ್ತಾರೆ ಮತ್ತು ಹೆಚ್ಚು ಸಮಯ ನಿದ್ರಿಸುತ್ತಾರೆ. ಸ್ಯಾನ್ ಫ್ರಾನ್ಸಿಸ್ಕೋದ ಬಯೋಮೆಡಿಕಲ್ ವಿಜ್ಞಾನಿ ಡಾ. ಬೀಕಿನ್ ಲುವೊ ಅವರ ಪ್ರಕಾರ ನಿದ್ದೆ ಮಾಡುವಾಗ ಪಾದಗಳನ್ನು ಬೆಚ್ಚಗಾಗಿಸುವುದರಿಂದ ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಸಾಕ್ಸ್ ಧರಿಸುವುದರಿಂದ ಚೆನ್ನಾಗಿ ನಿದ್ರೆ ಮಾಡಬಹುದಂತೆ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ, ಉತ್ತಮ ಮಾಯಿಶ್ಚರೈಸರ್ ಹಚ್ಚಿ, ನಂತರ ಮಲಗುವ ಮುನ್ನ ಸಾಕ್ಸ್ ಧರಿಸಿದರೆ, ನಿಮಗೆ ಉತ್ತಮ ನಿದ್ರೆ ಬರುತ್ತದೆ ಎಂದು ಹೇಳಲಾಗುತ್ತದೆ.
ಸಾಕ್ಸ್ ಧರಿಸುವುದು ನಿದ್ರೆಗೆ ಹೇಗೆ ಸಹಾಯ ಮಾಡುತ್ತದೆ?
ಮಲಗುವ ಮುನ್ನ ಸಾಕ್ಸ್ ಧರಿಸುವುದರಿಂದ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸಬಹುದು. ನಿಮ್ಮ ಪಾದಗಳು ಬೆಚ್ಚಗಿರುವಾಗ, ನಿಮ್ಮ ರಕ್ತನಾಳಗಳು ಹಿಗ್ಗುತ್ತವೆ. ಇದು ಉತ್ತಮ ರಕ್ತ ಪರಿಚಲನೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಆದ್ದರಿಂದ, ನೀವು ಮಲಗುವ ಮುನ್ನ ಕಾಲಿಗೆ ಸಾಕ್ಸ್ ಧರಿಸಿದರೆ, ನಿಮಗೆ ಉತ್ತಮ ನಿದ್ರೆ ಸಿಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ, ಇದು ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅವುಗಳೆಂದರೆ,
ಇದು ಪಾದಗಳನ್ನು ಚಳಿಯಿಂದ ರಕ್ಷಿಸುವುದಲ್ಲದೆ, ನೆಮ್ಮದಿಯಿಂದ ಮಲಗಲು ಸಹಾಯ ಮಾಡುತ್ತದೆ.
ಸಾಕ್ಸ್ ಧರಿಸುವುದರಿಂದ ಹಿಮ್ಮಡಿ ಬಿರುಕು ಮೂಡುವ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
ಸಾಕ್ಸ್ ಧರಿಸುವುದರಿಂದ ಪಾದಗಳಲ್ಲಿನ ಊತ ಮತ್ತು ನೋವು ಕಡಿಮೆಯಾಗುತ್ತದೆ.
ನಿಯಮಿತವಾಗಿ ಸಾಕ್ಸ್ ಧರಿಸುವುದರಿಂದ ಪಾದಗಳು ಸುಂದರವಾಗಿ ಕಾಣುತ್ತದಂತೆ.
ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು:
ವೈದ್ಯರ ಪ್ರಕಾರ, ನಿಮ್ಮ ಪಾದಗಳನ್ನು ಬೆಚ್ಚಗಾಗಿಸುವುದರಿಂದ ನಿದ್ರೆ ಸುಧಾರಿಸಬಹುದು, ಆದರೆ ಒಂದಷ್ಟು ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಅದೇನೆಂದರೆ, ಸಾಕ್ಸ್ ತುಂಬಾ ಬಿಗಿಯಾಗಿದ್ದರೆ ಅಥವಾ ಕೊಳಕಾಗಿದ್ದರೆ, ಬೆವರು ಸಂಗ್ರಹವಾಗಬಹುದು, ಇದು ತುರಿಕೆ, ಚರ್ಮದ ದದ್ದುಗಳು ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಅಲ್ಲದೆ ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತದ ಹರಿವಿಗೆ ಅಡ್ಡಿಯಾಗಬಹುದು, ಇದು ಪಾದಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಗೆ ಕಾರಣವಾಗಬಹುದು. ಹಾಗಾಗಿ ಮಲಗುವ ಮುನ್ನ ನೀವು ಸಾಕ್ಸ್ ಧರಿಸಲು ಬಯಸಿದರೆ ಹಗುರವಾದ ಹತ್ತಿ ಸಾಕ್ಸ್ ಧರಿಸಿ. ಬಿಗಿಯಾದ ಸಾಕ್ಸ್‌ಗಳನ್ನು ಧರಿಸಬೇಡಿ.
ಉಗ್ರಂ ಮಂಜುಗೆ ಕೂಡಿ ಬಂತು ಕಂಕಣ ಭಾಗ್ಯ; ಮದುವೆಯಾಗುತ್ತಿರುವ ಹುಡುಗಿ ಯಾರು?; ಇದು ಲವ್ ಮ್ಯಾರೇಜಾ?