Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ತಮಿಳುನಾಡು: 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಿರುವರೂರು ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯವು 39 ವರ್ಷದ ಲಲಿತಾ ಎಂಬ ಮಹಿಳೆಗೆ 54 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹18,000 ದಂಡ ವಿಧಿಸಿದೆ.
ತಮಿಳುನಾಡಿನ ದೇಡಿಯೂರು ಮೂಲದ ಲಲಿತಾ ತಿರುವರೂರು ಜಿಲ್ಲೆಯ ಎರವಾಂಚೇರಿ ಪ್ರದೇಶದ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು.
2021ರಲ್ಲಿ ಈಕೆ 14 ವರ್ಷದ ವಿದ್ಯಾರ್ಥಿಯ (ಆಗ ಹತ್ತನೇ ತರಗತಿ ಓದುತ್ತಿದ್ದ) ಜೊತೆ ಸಂಪರ್ಕ ಬೆಳೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 26, 2021ರಂದು ಲಲಿತಾ ಆ ಬಾಲಕನನ್ನು ಊಟಿಗೆ ಕರೆದುಕೊಂಡು ಹೋಗಿ ತನ್ನೊಂದಿಗೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ.
ಬಾಲಕ ಮನೆಗೆ ಬಾರದ ಕಾರಣ ಪೋಷಕರು ಎರವಾಂಚೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ತನಿಖೆಯ ವೇಳೆ, ಲಲಿತಾ ಬಾಲಕನನ್ನು ಊಟಿಯಿಂದ ವೇಲಾಂಕಣ್ಣಿಗೆ ಕರೆದೊಯ್ದು ಲಾಡ್ಜ್‌ನಲ್ಲಿ ತಂಗಿದ್ದಳು ಎಂಬುದು ಗೊತ್ತಾಯಾಯಿತು.
ತೀವ್ರ ಶೋಧದ ಬಳಿಕ ಪೊಲೀಸರು 2021ರ ನವೆಂಬರ್ 4ರಂದು ಲಲಿತಾಳನ್ನು ಪತ್ತೆಹಚ್ಚಿ, ಬಾಲಕನನ್ನು ರಕ್ಷಿಸಿದರು. ನಂತರ, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಲಲಿತಾಳನ್ನು ಬಂಧಿಸಲಾಯಿತು.ಪ್ರಕರಣದ ವಿಚಾರಣೆ ತಿರುವರೂರು ಫಾಸ್ಟ್ ಟ್ರ್ಯಾಕ್ ಮಹಿಳಾ ನ್ಯಾಯಾಲಯದಲ್ಲಿ ನಡೆಯಿತು.
ಎರಡು ಕಡೆ ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶ ಶರತ್‌ರಾಜ್ ಅವರು ಲಲಿತಾಳ ವಿರುದ್ಧದ ಆರೋಪಗಳು ದೃಢಪಟ್ಟಿವೆ ಎಂದು ತೀರ್ಪು ನೀಡಿದರು. ಅದನಂತರ, ಪೋಕ್ಸೋ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ 54 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹18,000 ದಂಡ ವಿಧಿಸಿದರು. ಇದೇ ವೇಳೆ, ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ಬಾಲಕನಿಗೆ ₹6 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.