Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿಯೇ ಮಾತನಾಡಿ, ಕೆಲವೊಮ್ಮೆ ಅಪಾಯವನ್ನೂ ಮೈಮೇಲೆ ಎಳೆದುಕೊಂಡು ವಿಡಿಯೋ ಮಾಡುತ್ತಲೇ ಲಕ್ಷ ಲಕ್ಷ ಮಂದಿಯ ಪ್ರೀತಿಗೆ ಪಾತ್ರರಾದವರು ಡಾ.ಬ್ರೋ. ಇದೀಗ ಸ್ವಂತ ಬಿಜಿನೆಸ್ ಆರಂಭಿಸಿರೋ ಡಾ.ಬ್ರೋ ಅರ್ಥಾತ್ ಗಗನ್ ಅವರು ವಿಡಿಯೋ ಮಾಡಿ ಅದನ್ನು ಶೇರ್ ಮಾಡಿಕೊಳ್ಳುವುದು ತೀರಾ ಅಪರೂಪವಾಗಿದೆ.
ಸದ್ಯ ವಿಡಿಯೋ ದಲ್ಲಿ ಮಾರಿಟೇನಿಯಾ ದೇಶದ ಬಗ್ಗೆ ಕುತೂಹಲದ ಮಾಹಿತಿಗಳನ್ನು ನೀಡಿದ್ದಾರೆ. 100 ವರ್ಷಗಳ ಹಳೆಯ ಕಾರಿನಲ್ಲಿ ಅವರು ಸವಾರಿ ಮಾಡಿದ್ದಾರೆ. ಈ ಸಮಯದಲ್ಲಿ ತಾವು ಭಾರತದವ ಎಂದು ಡಾ.ಬ್ರೋ ಪರಿಚಯಿಸಿಕೊಂಡಾಗ, ಮುಸ್ಲಿಮಾ ಎಂದು ಚಾಲಕ ಕೇಳಿದ್ದಾನೆ. ಆಗ ಡಾ.ಬ್ರೋ ಭಾರತದವ ಎಂದಿದ್ದಾರೆ.
ಕೊನೆಗೆ ತಾವು ಕುಳಿತ ಕಾರು ಎಷ್ಟು ವರ್ಷ ಹಳೆಯದ್ದು ಎಂದಾಗ 100 ವರ್ಷ ಎಂದಿದ್ದಾನೆ ಚಾಲಕ. ಅದನ್ನು ಕೇಳಿ ಡಾ.ಬ್ರೋ ಮಾಷಲ್ಲಾ ಎಂದಾಗ, ಚಾಲಕನಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ
ಅಂದಾಗೆ, ಮಧ್ಯಯುಗದಲ್ಲಿ ಮಾರಿಟಾನಿಯಾ ಅಲ್ಮೊರಾವಿಡ್ ಇದು ಪ್ರದೇಶದಾದ್ಯಂತ ಇಸ್ಲಾಂ ಅನ್ನು ಹರಡಿತು ಮತ್ತು ಸ್ವಲ್ಪ ಸಮಯದವರೆಗೆ ಸ್ಪೇನ್‌ನ ಇಸ್ಲಾಮಿಕ್ ಭಾಗವನ್ನು ನಿಯಂತ್ರಿಸಿತು. ಆದ್ದರಿಂದ ಇಲ್ಲಿ ಇರುವವರು ಮುಸ್ಲಿಮರಾಗಿದ್ದು, ಈ ಚಾಲಕ ಕೂಡ ತನ್ನನ್ನು ತಾನು ಅದೇ ರೀತಿ ಪರಿಚಯಿಸಿಕೊಂಡಿದ್ದಾನೆ. ಆದರೆ ಇದು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ ಮತ್ತು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ.
ಕೊನೆಯಲ್ಲಿ ಡಿವೋರ್ಸ್ ಮಾರುಕಟ್ಟೆಗೆ ಕರೆದುಕೊಂಡು ಹೋಗಿದ್ದಾರೆ ಡಾ.ಬ್ರೋ. ಇಲ್ಲಿ ಇರುವುದು ವಿಚ್ಛೇದಿತ ಮಹಿಳೆಯರೇ. ಇಲ್ಲಿಯ ಹೆಂಗಸರಿಗೆ ಡಿವೋರ್ಸ್ ಆಗುವುದು ಎಂದರೆ ಬಹಳ ಖುಷಿಯಂತೆ. ಡಿವೋರ್ಸ್ ಆದ ಬಳಿಕ, ಮನೆಯಲ್ಲಿ ಇದ್ದ ಎಲ್ಲಾ ಸಾಮಾನುಗಳನ್ನು ಒಂದೂ ಬಿಡದೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರಂತೆ. ಅದಕ್ಕಾಗಿಯೇ ಡಿವೋರ್ಸ್ ಮಹಿಳೆಯರ ಮಾರುಕಟ್ಟೆಯೂ ಇಲ್ಲಿ ಫೇಮಸ್ ಆಗಿದ್ದು, ಅದರ ಬಗ್ಗೆ ಡಾ.ಬ್ರೋ ವಿವರಣೆ ನೀಡಿದ್ದಾರೆ.