Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅಣ್ಣ, ಗರ್ಭಿಣಿ ಅತ್ತಿಗೆ‌ ಕೊಂ*ದ ಅಪ್ರಾಪ್ತ, ಅತ್ತಿಗೆ ಮೇಲೆ ಅತ್ಯಾ*ಚಾರ, ಇಬ್ಬರನ್ನೂ ಬೆತ್ತಲಾಗಿಸಿ ಹೂತಿದ್ದ ಆರೋಪಿ!
ದೇಶಪ್ರಮುಖ

ಅಣ್ಣ, ಗರ್ಭಿಣಿ ಅತ್ತಿಗೆ‌ ಕೊಂ*ದ ಅಪ್ರಾಪ್ತ, ಅತ್ತಿಗೆ ಮೇಲೆ ಅತ್ಯಾ*ಚಾರ, ಇಬ್ಬರನ್ನೂ ಬೆತ್ತಲಾಗಿಸಿ ಹೂತಿದ್ದ ಆರೋಪಿ!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಗುಜರಾತ್‌ನ ಜುನಾಗಢದ ಶೋಭವದಲಾ ಗ್ರಾಮದ ಖೋಡಿಯಾರ್ ಆಶ್ರಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ ತನ್ನ ಅಣ್ಣ ಮತ್ತು ಗರ್ಭಿಣಿ ಅತ್ತಿಗೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ತನ್ನ ಅತ್ತಿಗೆಯನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಇಷ್ಟಕ್ಕೇ ಸುಮ್ಮನಾಗದ ಆರೋಪಿ ಅತ್ತಿಗೆಯ ಹೊಟ್ಟೆಗೆ ಬಲವಾಗಿ ಒದ್ದಿದ್ದರಿಂದ ಆಕೆಯ 6 ತಿಂಗಳ ಭ್ರೂಣ ಗರ್ಭದಿಂದ ಹೊರಗೆ ಬಂದಿದೆ.

ಈ ಘಟನೆ ಅಕ್ಟೋಬರ್ 16ರಂದು ನಡೆದಿದ್ದು, ಅಕ್ಟೋಬರ್ 31ರಂದು ಬೆಳಕಿಗೆ ಬಂದಿತು. ಆರೋಪಿಯು ತನ್ನ ಸಹೋದರ ಮತ್ತು ಅತ್ತಿಗೆಯ ಶವಗಳನ್ನು ಮನೆಯಲ್ಲಿ ಬೆತ್ತಲೆಯಾಗಿ ಹೂತುಹಾಕಿದ್ದ.

ಕೊಲೆ ಮಾಡಿದ ನಂತರ ಆರೋಪಿ ಅವರ ಬಟ್ಟೆಗಳಿಗೆ ಬೆಂಕಿ ಹಚ್ಚಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದ. ಆರೋಪಿಗೆ ಆತನ ಅಣ್ಣ ಮತ್ತು ಅತ್ತಿಗೆಯ ಶವಗಳನ್ನು ಮನೆಯಲ್ಲಿ ಹೂಳಲು ಆರೋಪಿಯ ತಾಯಿ ಸಹಾಯ ಮಾಡಿದ್ದಳು. ಅಕ್ಟೋಬರ್ 31ರಂದು ಪೊಲೀಸರು ಆಶ್ರಮಕ್ಕೆ ಹೋಗಿ ಆಶ್ರಮದ ಹಿಂದಿನ ಮನೆಯಿಂದ ಗಂಡ, ಹೆಂಡತಿ ಮತ್ತು ನವಜಾತ ಶಿಶುವಿನ ಕೊಳೆತ ಶವಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ಸಹ ಬಂಧಿಸಿದ್ದಾರೆ.

ಮೃತರನ್ನು ಶಿವಮಗಿರಿ (22 ವರ್ಷ) ಮತ್ತು ಆತನ ಪತ್ನಿ ಕಾಂಚನ್ ಕುಮಾರಿ (19) ಎಂದು ಗುರುತಿಸಲಾಗಿದೆ. ಶಿವಮಗಿರಿ ಆಶ್ರಮದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳು ಗೋಶಾಲೆಯಲ್ಲಿ ಹಸುಗಳಿಗೆ ಸೇವೆ ಸಲ್ಲಿಸುತ್ತಿದ್ದರು.

ಮಲಗಿದ್ದಾಗ ಸಹೋದರನ ಮೇಲೆ ಆರೋಪಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದನು. ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮದ್ಯದ ಚಟ ಹೊಂದಿದ್ದು ಇದು ಮನೆಯಲ್ಲಿ ಆಗಾಗ ಜಗಳಗಳಿಗೆ ಕಾರಣವಾಗುತ್ತಿತ್ತು. ಕುಡಿಯುವುದನ್ನು ಬಿಡುವಂತೆ ಸಹೋದರ ಪದೇ ಪದೇ ಹೇಳುತ್ತಿದ್ದ. ಇದು ಆರೋಪಿಗೆ ಅಣ್ಣನ ಮೇಲೆ ದ್ವೇಷ ಮೂಡಲು ಕಾರಣವಾಯಿತು.

ಅಲ್ಲದೆ ಅಣ್ಣ ತನ್ನ ತಮ್ಮನಿಗೆ ಬರುತ್ತಿದ್ದ ಸಂಬಳದ ಹಣವನ್ನು ತಾನೇ ಇಟ್ಟುಕೊಳ್ಳುತ್ತಿದ್ದ. ಇದು ಕೊಲೆಗೆ ಕಾರಣವಾಯಿತು. ಅಕ್ಟೋಬರ್ 16ರ ಬೆಳಗ್ಗೆ ಅಣ್ಣ ಮಲಗಿದ್ದಾಗ, ಆರೋಪಿ ಕಬ್ಬಿಣದ ರಾಡ್‌ನಿಂದ ಅವರ ತಲೆಯ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ ಆತ ಸಾಯುವವರೆಗೂ ಹೊಡೆಯುತ್ತಲೇ ಇದ್ದ. ಪತಿಯ ಕಿರುಚಾಟ ಕೇಳಿ ಅಲ್ಲಿಗೆ ಪತ್ನಿ ಕಾಂಚನ್ ಬಂದಿದ್ದಾಳೆ. ಮೈದುನ ತನ್ನನ್ನು ಕೊಲ್ಲುತ್ತಾನೆ ಎಂದು ಭಾವಿಸಿ ಆಕೆ ಬಿಟ್ಟುಬಿಡುವಂತೆ ಕೇಳಿಕೊಂಡಿದ್ದಾಳೆ.

ಆದರೆ ಕ್ರೋಧದಲ್ಲಿದ್ದ ಆರೋಪಿ ತನ್ನ ಕೊಲೆ ರಹಸ್ಯ ಹೊರಗೆ ಬರುತ್ತದೆ ಎಂದು ಹೆದರಿದ್ದಾನೆ. ಕೂಡಲೇ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ. ಕೊಲ್ಲುವ ಮೊದಲು ಆಕೆಯನ್ನು ರೇಪ್ ಮಾಡಿದ್ದಾನೆ. ನಂತರ ಹೊಟ್ಟೆ ಮೇಲೆ ಕುಳಿತುಕೊಂಡು ಜೋರಾಗಿ ಕತ್ತು ಹಿಸುಕಿದ್ದಾನೆ. ಈ ವೇಳೆ ಒತ್ತಡ ಹೆಚ್ಚಾಗಿ ಹೊಟ್ಟೆಯಲ್ಲಿದ್ದ ಭ್ರೂಣ ಹೊರಕ್ಕೆ ಬಂದಿದ್ದು ಮಹಿಳೆ ಸಾವನ್ನಪ್ಪಿದ್ದಳು. ನಂತರ ಆರೋಪಿ ಮನೆಯಲ್ಲೇ ಐದು ಅಡಿ ಆಳದ ಗುಂಡಿಯನ್ನು ಅಗೆದು ಶವಗಳನ್ನು ಹೂತು ಹಾಕಿದ್ದ.

ಬಹಿರಂಗವಾದದ್ದು ಹೇಗೆ?

ಮೃತ ಮಹಿಳೆಯ ಪೋಷಕರು ತಮ್ಮ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ದೀಪಾವಳಿಯ ಸಮಯದಲ್ಲಿ ಮಗಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಅನುಮಾನಗೊಂಡ ಪೋಷಕರು ಅಳಿಯನಿಗೂ ಫೋನ್‌ ಮಾಡಿದ್ದಾರೆ. ಆದರೆ ಅಳಿಯನೂ ಸಂಪರ್ಕಕ್ಕೆ ಸಿಗಲಿಲ್ಲ. ಕೊನೆಗೆ ಅಳಿಯನ ತಾಯಿ ಕರೆಗೆ ಉತ್ತರಿಸಿ ಮಗ ಮತ್ತು ಸೊಸೆ ಗುಜರಾತ್‌ನ ಹಿಮ್ಮತ್‌ನಗರ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಮಹಿಳೆಯ ಪೋಷಕರು ಅಪಘಾತದ ಫೋಟೋಗಳು, ವೀಡಿಯೊಗಳು ಅಥವಾ ಯಾವುದೇ ದಾಖಲೆಗಳನ್ನು ಕೇಳಿದಾಗ ಅವರು ತಬ್ಬಿಬ್ಬಾದರು. ಇದರಿಂದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ವಿಚಾರಣೆ ವೇಳೆ ಪ್ರಕರಣ ಬಯಲಿಗೆ ಬಂದಿದೆ.

19 ವರ್ಷಗಳ ನಂತರ ದಂಪತಿಗೆ ಗರ್ಭಿಣಿಯಾಗಲು AI ಸಹಾಯ

TAGGED:and buried both of them naked!raped herThe minor accusedwho killed his brother and pregnant sister-in-law
Share This Article
Facebook Twitter Copy Link Print
Previous Article ಪುತ್ರನ ಎದುರು ತಾಯಿಯಾದವಳು ಈ ಕೆಲಸ ಮಾಡಬಾರದು
Next Article ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ದಿನಾಂಕ ಪಿಕ್ಸ್

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?