Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ರೊಹ್ಟಕ್: ಮಹರ್ಷಿದಯಾನಂದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಬಳಿ ಪುರುಷ ಮೇಲ್ವಿಚಾರಕ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿರುವ ಘಟನೆ ಹರಿಯಾಣದ. ರೋಹ್ಟಕ್ನಲ್ಲಿ ಘಟನೆ ನಡೆದಿದೆ.
ರಾಜ್ಯಪಾಲರು ವಿವಿ ಕಾರ್ಯಕ್ರಮಕ್ಕೆ ಬರುವ ದಿನವೇ ಮಹಿಳಾ ಸ್ವಚ್ಚತಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದರು ಎಂಬ ಕಾರಣಕ್ಕೆ, ಪುರುಷ ಮೇಲ್ವಿಚಾರಕ ಸ್ತ್ರೀಯರ ಬಟ್ಟೆ ಬಿಚ್ಚಿಸಿ, ಮುಟ್ಟು ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.
ಅ.26ರಂದು ರಾಜ್ಯಪಾಲ ಅಸೀಮ್ ಕುಮಾರ್ ಘೋಷ್ 3 ದಿನಗಳ ಭೇಟಿಗಾಗಿ ಮಹರ್ಷಿ ದಯಾನಂದ್ ವಿವಿಗೆ ಆಗಮಿಸಿದ್ದರು.
ಅದೇ ದಿನದಂದು ಕೆಲ ಮಹಿಳಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದಿದ್ದಾರೆ. ತಾವು ಮುಟ್ಟಾಗಿದ್ದ ಕಾರಣ ಕೆಲಸಕ್ಕೆ ತಡವಾಯಿತು ಎಂದು ಕಾರಣ ಕೊಟ್ಟಿದ್ದಾರೆ.
ಇದನ್ನು ಹಾಗೆಯೇ ಒಪ್ಪದ ವಿಚಾರಕ, ಬೇರೆ ಮಹಿಳೆಯರಿಂದ ಹೆಂಗಸರ ವಸ್ತ್ರ ತೆಗೆಸಿ, ಅವರು ನಿಜವಾಗಿಯೂ ಮುಟ್ಟಾಗಿದ್ದಾರೆಯೇ ಎಂದು ಪರೀಕ್ಷೆ ನಡೆಸಿದ್ದಾನೆ. ಜೊತೆಗೆ ಸ್ಯಾನಿಟರಿ ಪ್ಯಾಡ್‌ಗಳ ಫೋಟೋ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಘಟನೆಯಿಂದ ತೀವ್ರ ಅವಮಾನಿತರಾದ ಸಂತ್ರಸ್ತರು ಮೇಲ್ವಿಚಾರಕನ ವಿರುದ್ಧ ವಿವಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮೇಲ್ವಿಚಾರಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮುಂಬೈನಲ್ಲಿ ವ್ಯಕ್ತಿಯೊಬ್ಬ ಒತ್ತೆಯಾಳಾಗಿ ಇಟ್ಟುಕೊಂಡಿದ್ದ 17 ಮಕ್ಕಳ ರಕ್ಷಣೆ; ಗುಂಡೇಟಿಗೆ ಅಪಹರಣಕಾರ ಸಾವು