Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅರ್ಚಕರು ಮತ್ತು ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ನೆರವು ನೀಡಲು ಸರ್ಕಾರ ವಿದ್ಯಾರ್ಥಿ ಪ್ರೋತ್ಸಾಹಧನ ಯೋಜನೆ ಜಾರಿಗೊಳಿಸಿದೆ.
ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಯೋಜನೆ ಪ್ರಕಾರ, ಪಿಯುಸಿ ವಿದ್ಯಾರ್ಥಿಗೆ 5,000,
ಪದವಿಗೆ 7,000, ಸ್ನಾತಕೋತ್ತರ ಪದವಿಗೆ 15,000
ಇಂಜಿನಿಯರಿಂಗ್‌ಗೆ 25,000
ವೈದ್ಯಕೀಯ/ ಡೆಂಟಲ್‌ಗೆ 50 ಸಾವಿರ,
ಇತರೆ ವೈದ್ಯಕೀಯ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ 25 ಸಾವಿರ,
ವಿದೇಶದಲ್ಲಿ ವ್ಯಾಸಂಗ ಮಾಡಲು 1 ಲಕ್ಷ ರೂ. ಪ್ರೋತ್ಸಾಹಧನ ಸಿಗಲಿದೆ.
ಈವರೆಗೆ 254 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವಾಗಿ 38.38 ಲಕ್ಷ ರೂ. ಪಾವತಿಸಲಾಗಿದ್ದು, ಇನ್ನು 19 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಯೋಜನೆ ಲಾಭ ಪಡೆದ ವಿದ್ಯಾರ್ಥಿಗಳ ಪೈಕಿ ಅರ್ಚಕರ 230 , ನೌಕರರ 24 ಮಕ್ಕಳಿದ್ದಾರೆ.
ಅಲ್ಲದೆ, 5 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷದಂತೆ 5 ಲಕ್ಷ ರೂ. ವಿದೇಶ ವ್ಯಾಸಂಗಕ್ಕೆ ಮಂಜೂರು ಮಾಡಲಾಗಿದೆ. ಐವರೂ ಅರ್ಚಕರ ಮಕ್ಕಳು ಎಂಬುದು ವಿಶೇಷ.
ಮುಜರಾಯಿ ಇಲಾಖೆಯ ಅರ್ಚಕರು/ಸಿಬ್ಬಂದಿ ಮೃತಪಟ್ಟಲ್ಲಿ ಯಾವುದೇ ಮರಣಾನಂತರ ಉಪಧನದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮೃತರ ಅವಲಂಬಿತರ ಕುಟುಂಬಕ್ಕೆ ರೂ.2 ಲಕ್ಷ ಪಾವತಿಸಲು ಕ್ರಮ ತೆಗೆದುಕೊಳ್ಳಲಾಗಿದೆ. 28 ಕುಟುಂಬಗಳಿಗೆ ತಲಾ ರೂ.2 ಲಕ್ಷಗಳಂತೆ ರೂ.56 ಲಕ್ಷಗಳನ್ನು ಪಾವತಿ ಮಾಡಲಾಗಿದೆ ಎಂದರು.
2004 ರಿಂದ ಸ್ಥಗಿತಕೊಂಡಿದ್ದ ಘಟಿಕೋತ್ಸವವನ್ನು ಪುನಃ ಪ್ರಾರಂಭಿಸಿ ಒಂದೇ ವರ್ಷದಲ್ಲಿ ಅಂದರೆ 2025 ರಲ್ಲಿ ಒಟ್ಟು 4600 ಅರ್ಚಕರುಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಗಿದೆ. ಮೈಸೂರಿನ ಸಮಾರಂಭದಲ್ಲಿ 2000 ಅರ್ಚಕರಿಗೆ, ಬೆಂಗಳೂರಿನಲ್ಲಿ 2600 ಮತ್ತು ಪ್ರಸಕ್ತ ವರ್ಷದ ಪ್ರಮಾಣ ಪತ್ರವನ್ನು ಡಿಸೆಂಬರ್ ನಲ್ಲಿ 1000 ಅರ್ಚಕರಿಗೆ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅಲ್ಲದೆ, ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಮುಜರಾಯಿ ಇಲಾಖೆಯ ಕಚೇರಿ ಧಾರ್ಮಿಕ ಸೌಧದ ನಿರ್ಮಾಣ ಕಾರ್ಯಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆಯಲ್ಲಿ ವಾಸ್ತು ಸಮಸ್ಯೆಯೇ? ಪ್ರತಿದಿನ ಜಸ್ಟ್ ಈ ರೀತಿ ಮಾಡಿ ಪರಿಹಾರವಾಗುತ್ತೆ
ನೆಲ ಒರೆಸಲು ಹಳೆಯ ಬಟ್ಟೆ ಬಳಸುತ್ತಿದ್ದೀರಾ? ಹಾಗಾದ್ರೆ ಎಚ್ಚರವಹಿಸಿ, ಈ ಸಮಸ್ಯೆ ತಪ್ಪಿದ್ದಲ್ಲ!