Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಸಂಗೀತಾ ಭಟ್ ಅವರು ಸಿನಿಮಾಗಳ ಮೂಲಕ ಗಮನ ಸೆಳೆದವರು. ಆದರೆ, ಈಗ ಅವರು ಬೆಡ್ ಮೇಲೆ ಮಲಗಿದ್ದಾರೆ. ಅವರಿಗೆ ಆಪರೇಷನ್ ಕೂಡ ಆಗಿದೆ. ಮಹಿಳೆಯರಾಗಿ ಈ ತಪ್ಪು ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ.
ಮುಟ್ಟಿನ ಸಮಯದಲ್ಲಿ ಸಮಸ್ಯೆ ಇದ್ದರೆ ಅದನ್ನು ಅನೇಕ ಮಹಿಳೆಯರು ನಿರ್ಲಕ್ಷಿಸುತ್ತಾರೆ. ಪದೇ ಪದೇ ಋತುಚಕ್ರ ಸಂಭವಿಸೋದು, ಹಲವು ತಿಂಗಳು ಮುಟ್ಟಾಗದೇ ಇರುವುದು ಅಥವಾ ಮುಟ್ಟಾದಾಗ ಸಹಿಸಲಾರದಷ್ಟು ನೋವು ಉಂಟಾಗುವುದು ಸರ್ವೇ ಸಾಮಾನ್ಯ ಎಂದುಕೊಂಡಿರುತ್ತಾರೆ. ಆದರೆ, ವೈದ್ಯ ಲೋಕ ಇದನ್ನು ಸಾಮಾನ್ಯ ಎಂದು ಪರಿಗಣಿಸೋದಿಲ್ಲ. ಇದರ ಹಿಂದೆ ‘ಆ ಒಂದು’ ಕಾರಣ ಇರಬಹುದು ಎಂದು ನಟಿ ಸಂಗೀತಾ ಭಟ್ ಹೇಳುತ್ತಾರೆ. ಇದು ಅವರ ಸ್ವ ಅನುಭವದ ಮಾತು
ಸಂಗೀತಾ ಭಟ್ಗೆ ಕಳೆದ ಕೆಲವು ತಿಂಗಳಿಂದ ಪದೇ ಪದೇ ಋತುಚಕ್ರ ಸಂಭವಿಸುತ್ತಿತ್ತು. ಇದರ ಜೊತೆಗೆ ಅತೀವ ನೋವು. ಮೊದಲು ವೈದ್ಯರೊಬ್ಬರನ್ನು ಸಂಪರ್ಕಿಸಿದಾಗ ಇದು ಸಾಮಾನ್ಯ ಎಂದಿದ್ದರು. ಕುಟುಂಬದವರಿಗೂ ಹಾಗೆಯೇ ಅನಿಸಿತು. ಹೀಗಾಗಿ, ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಸಂಗೀತಾಗೆ ಮಾತ್ರ ಇದು ಸಾಮಾನ್ಯದ ರೀತಿ ಕಾಣಿಸಲೇ ಇಲ್ಲ. ಹೀಗಾಗಿ, ಸ್ಕ್ಯಾನಿಂಗ್ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಿದಾಗ ಗರ್ಭಕೋಶದಲ್ಲಿ 1.75 ಸೆಂಟಿಮೀಟರ್ ಗಡ್ಡೆ ಬೆಳೆದಿರುವುದು ಕಂಡು ಬಂತು. ಈ ಗಡ್ಡೆಯೇ ಈ ಸಮಸ್ಯೆಗೆಲ್ಲ ಕಾರಣ ಎಂದು ವೈದ್ಯರು ಹೇಳಿದರು. ಹೀಗಾಗಿ ಸಂಗೀತಾ ಭಟ್ ಅವರು ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾದರು.
ಈ ಆಪರೇಷನ್ ಮಾಡಿದ ಬಳಿಕ ಇಷ್ಟೇ ದಿನಕ್ಕೆ ರಿಕವರಿ ಆಗುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಈ ಗಡ್ಡೆ ಒಮ್ಮೆ ಆಪರೇಷನ್ ಮಾಡಿಸಿದ ಬಳಿಕ ಮತ್ತೆ ಬರಬಹುದು. ಜೀವನ ಪೂರ್ತಿ ಈ ಸಮಸ್ಯೆ ಜೊತೆ ಬದುಕಬೇಕಾಗಿ ಬರಬಹುದು’ ಎಂದು ಸಂಗೀತಾ ಭಟ್ ಹೇಳುತ್ತಾರೆ. ಋತುಚಕ್ರದಲ್ಲಿ ವ್ಯತ್ಯಯ ಉಂಟಾಗಬಹುದು. ಮುಟ್ಟಿನ ಸಮಯದಲ್ಲಿ ಅತೀವ ನೋವು ಕಾಣಿಸಿಕೊಳ್ಳುತ್ತದೆಯಂತೆ. ದೇಹದ ತೂಕ ಹೆಚ್ಚೋದು, ತಲೆಕೂದಲು ಉದುರೋ ಸಮಸ್ಯೆ ಕಾಣಿಸುತ್ತದೆಯಂತೆ.
ಎಷ್ಟೋ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿರಬಹುದು. ಹೀಗಾಗಿ ಅದನ್ನು ನಿರ್ಲಕ್ಷಿಸಬಾರದು. ಮುಂದೊಮ್ಮೆ ಇದು ಕ್ಯಾನ್ಸರ್ ಆಗಿಯೂ ಬದಲಾಗುವ ಸಾಧ್ಯತೆ ಇರುತ್ತದೆ. ಗರ್ಭಕೋಶ ಲೈನ್ಅಲ್ಲೇ ಬೆಳೆಯುವುದರಿಂದ ಮುಂದೆ ಪ್ರೆಗ್ನೆನ್ಸಿಗೂ ಸಮಸ್ಯೆ ಉಂಟು ಮಾಡಬುದು ಎಂದು ಸಂಗೀತಾ ಭಟ್ ಜಾಗೃತಿ ಮೂಡಿಸೋ ಕೆಲಸ ಮಾಡಿದ್ದಾರೆ.