Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕರ್ನೂಲ್: ಖಾಸಗಿ ಬಸ್ ಗೆ ಬೆಂಕಿ ತಗುಲಿ ಸುಮಾರು 8 ರಿಂದ 10 ಜನ ಸಜೀವ ದಹನವಾಗಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಬಳಿ ನಡೆದಿದೆ.
ಹೈದರಾಬಾದ್ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಹೊತ್ತಿ ಉರಿದಿದೆ. ಬಸ್ ನಲ್ಲಿ ಸುಮಾರು 30ಕ್ಕೂ ಅಧಿಕ ಪ್ರಯಾಣಿಕರು ಇದ್ದ ಮಾಹಿತಿ ಗೊತ್ತಾಗಿದೆ. ಮುಂಜಾನೆ 3ರಿಂದ 4 ಗಂಟೆ ನಡುವೆ ಘಟನೆ ನಡೆದಿದೆ.
ಬಸ್ ನಲ್ಲಿದ್ದ ಕೆಲವು ಗ್ಲಾಸ್ ಒಡೆದು ಹೊರಗೆ ಬಂದಿದ್ದಾರೆ. ಇನ್ನು ಕೆಲವರು ಎಮರ್ಜೆನ್ಸಿ ದ್ವಾರದ ಮೂಲಕ ಹೊರಗೆ ಬಂದಿದ್ದಾರೆ. ಬಸ್ ನಿಂದ ಹೊರ ಬಂದು 20 ಪ್ರಯಾಣಿಕರು ಪ್ರಾಣ ಉಳಿಸಿಕೊಂಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.