Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕೇಂದ್ರ ಸರ್ಕಾರವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಸಣ್ಣ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಮಹತ್ವದ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದರಿಂದಾಗಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದ್ದು, 2027ರೊಳಗೆ ಈ ವಿಲೀನ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಗುರಿ ಇದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ), ಬ್ಯಾಂಕ್ ಆಫ್ ಇಂಡಿಯಾ (ಬಿಒಐ) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಂತಹ ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಕುರಿತ ಚರ್ಚೆಗಳನ್ನು ನಡೆಸಿ 2027ರ ಒಳಗೆ ವಿಲೀನವನ್ನು ಅಂತಿಮಗೊಳಿಸುವ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ.
ಈ ವಿಲೀನ ಪ್ರಸ್ತಾವನೆಯ ಕುರಿತ ಅಧಿಕೃತ ಚರ್ಚೆಯ ದಾಖಲೆಯನ್ನು (ರೆಕಾರ್ಡ್ ಆಫ್ ಡಿಸ್ಕಷನ್) ಮೊದಲು ಸಂಪುಟ ಸಭೆಯಲ್ಲಿ ಚರ್ಚಿಸಿ, ನಂತರ ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಪರಿಶೀಲನೆಗೆ ಕಳುಹಿಸಲಾಗುತ್ತದೆ. ಬಳಿಕ ಸಂಬಂಧಪಟ್ಟ ಬ್ಯಾಂಕ್‌ಗಳ ಅಭಿಪ್ರಾಯವನ್ನು ಪಡೆದು, ಆಂತರಿಕವಾಗಿ ಒಮ್ಮತ ಮೂಡಿದ ನಂತರವೇ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ಪಿಎಸ್‌ಬಿ ಬಲವರ್ಧನೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವಾಗ ಈ ಬೆಳವಣಿಗೆ ಸಂಭವಿಸಿದೆ. ಸರ್ಕಾರವು ತನ್ನ ಮಧ್ಯಮಾವಧಿ ಬ್ಯಾಂಕಿಂಗ್ ವಲಯ ಸುಧಾರಣಾ ಕಾರ್ಯತಂತ್ರದ ಭಾಗವಾಗಿ ವಿಲೀನ ಪ್ರಸ್ತಾಪಗಳನ್ನು ಕೈಗೆತ್ತಿಕೊಳ್ಳಲು ಯೋಜಿಸಿದೆ. 2017 ಮತ್ತು 2020 ರ ನಡುವೆ, ಸರ್ಕಾರವು 10 ಪಿಎಸ್‌ಬಿಗಳನ್ನು ನಾಲ್ಕು ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಿತು, ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ 2017 ರಲ್ಲಿ 27 ರಿಂದ 12 ಕ್ಕೆ ಇಳಿದಿದೆ.
ನೀತಿ ಆಯೋಗದ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಬ್ಯಾಂಕ್ ವಿಲೀನಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. ಎಸ್‌ಬಿಐ, ಪಿಎನ್‌ಬಿ, ಬಿಒಬಿ ಮತ್ತು ಕೆನರಾ ಬ್ಯಾಂಕ್‌ನಂತಹ ಕೆಲವೇ ಕೆಲವು ದೊಡ್ಡ ಸರ್ಕಾರಿ ಬ್ಯಾಂಕ್‌ಗಳನ್ನು ಮಾತ್ರ ಉಳಿಸಿಕೊಂಡು, ಉಳಿದ ಸಣ್ಣ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಅಥವಾ ವಿಲೀನಗೊಳಿಸಲು ನೀತಿ ಆಯೋಗ ಈ ಹಿಂದೆ ಶಿಫಾರಸು ಮಾಡಿತ್ತು